ಬೆಳ್ತಂಗಡಿ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಮಹಾಸಭೆ ಸೆ.21ರಂದು ಬೆಳ್ತಂಗಡಿ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ಇವರ ಅಧ್ಯಕ್ಷತೆಯಲ್ಲಿ ಜರಗಿತು.ವರದಿ ಹಾಗೂ ಲೆಕ್ಕಪತ್ರಗಳನ್ನು ಬ್ಯಾಂಕಿನ ವ್ಯವಸ್ಥಾಪಕ ಕೆ.ಗಿರಿಧರ ಮಂಡಿಸಿದರು.
ನಮ್ಮ ಬ್ಯಾಂಕ್ ಪ್ರಾರಂಭಿಸಿ 63ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದೇವೆ.16458 ಸದಸ್ಯರು ಇದ್ದಾರೆ, ಅದರಲ್ಲಿ ಸಕ್ರಿಯ ಸದಸ್ಯರು 4414 ಇದ್ದಾರೆ.ಅದರಲ್ಲಿ 298 ಪರಿಶಿಷ್ಟ ಜಾತಿ, 194 ಪರಿಶಿಷ್ಟ ಪಂಗಡ, 1448 ಮಹಿಳೆಯರು, 940 ಅಲ್ಪಸಂಖ್ಯಾತ ಸದಸ್ಯರು ಇದ್ದಾರೆ.ನಮ್ಮ ಬ್ಯಾಂಕ್ ಆರ್ಥಿಕ ವರ್ಷದಲ್ಲಿ 33.05 ಲಕ್ಷ ಲಾಭ ಹೊಂದಿದೆ.ಬ್ಯಾಂಕಿನ ಹೊರ ಬಾಕಿ ವರ್ಷಾಂತ್ಯಕ್ಕೆ ನಬಾರ್ಡ್ ಸಾಲ ರೂ.822.85 ಲಕ್ಷ, ಸ್ವಂತ ಬಂಡವಾಳ ಸಾಲ ರೂ.2142.07 ಲಕ್ಷ ಹಾಗೂ ನಬಾರ್ಡ್ ನೇರ ಸಾಲ 36.23 ಲಕ್ಷ ಇರುತ್ತದೆ.ಹಿಂದಿನ ಸಾಲಿನಿಂದಲೂ ಬ್ಯಾಂಕಿನಲ್ಲಿ ಠೇವಣಾತಿ ಪಡೆದು ರೈತ ಸದಸ್ಯರಿಗೆ ಠೇವಣಾತಿ ಹಣದಿಂದಲೂ ಕೃಷಿ ಸಾಲ ನೀಡುವ ವ್ಯವಸ್ಥೆ ಇದ್ದು, ಆಭರಣ ಸಾಲವನ್ನೂ ನೀಡುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ಹೇಳಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ವಾಮನ ಗೌಡ, ಎಂ.ಈಶ್ವರ್ ಭಟ್, ಶುಭಕರ ಪೂಜಾರಿ, ಕರಿಯ ನಾಯ್ಕ, ಶ್ರೀಧರ ಕೆ., ವಾಮನ ಬಾಳಿಗಾ, ಸಂತೋಷ್ ಕುಮಾರ್, ಲೋಕಯ್ಯ ಗೌಡ, ವಿಜಯ, ಶಂಕರ ವಿಠಲ ಎನ್., ಶೀಲಾ, ದಿನೇಶ, ನಾಮ ನಿರ್ದೇಶಿತ ನಿರ್ದೇಶಕ ಸಂಜೀವ ಪೂಜಾರಿ ಉಪಸ್ಥಿತರಿದ್ದರು.
ಬ್ಯಾಂಕಿನ ಸಿಬ್ಬಂದಿ ಪ್ರಶಾಂತ್ ಶೆಟ್ಟಿ ಪ್ರಾರ್ಥಿಸಿದರು.ಬ್ಯಾಂಕಿನ ಅಧ್ಯಕ್ಷ ಸೋಮನಾಥ ಬಂಗೇರ ಸ್ವಾಗತಿಸಿ, ಬ್ಯಾಂಕಿನ ಉಪಾಧ್ಯಕ್ಷ ವಾಮನ ಗೌಡ ಧನ್ಯವಾದವಿತ್ತರು.