Site icon Suddi Belthangady

ಮಡಂತ್ಯಾರಿನಲ್ಲಿ ಉಲಾಯಿ-ಪಿದಾಯಿ ಜುಗಾರಿ: 24 ಮಂದಿ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯ ಬಳಿಯಿರುವ ಅಲ್ಬರ್ಟ್ ಡಿ’ಸೋಜಾ ಎಂಬವರಿಗೆ ಸೇರಿದ ಕಟ್ಟಡದ ಹಿಂಭಾಗದಲ್ಲಿರುವ ಶೆಡ್‌ನೊಳಗೆ ಸುಮಾರು 15-20 ಜನರು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿ –ಪಿದಾಯಿ (ಅಂದರ್‌-ಬಹಾರ್‌ ) ಎಂಬ ಅದೃಷ್ಟದ ಆಟವನ್ನು ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪುಂಜಾಲಕಟ್ಟೆ ಪೊಲೀಸ್‌ ಠಾಣಾ ಪಿಎಸ್‌ಐ ನಂದಕುಮಾರ್‌ ಎಂ.ಎಂ ರವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಕೃತ್ಯದಲ್ಲಿ ತೊಡಗಿದ್ದ 23 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು, ಜುಗಾರಿ ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಸ್ವಾಧೀನಪಡಿಸಿಕೊಂಡಿರುವ ನಗದು ಸೇರಿ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 36729/- ಆಗಬಹುದು. ಈ ಬಗ್ಗೆ ನ್ಯಾಯಾಲಯದಿಂದ ಅನುಮತಿ ಪಡೆದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 67/2024 ಕಲಂ: 79, 80 ಕರ್ನಾಟಕ ಪೊಲೀಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಮೊನಪ್ಪ ಪೂಜಾರಿ, ಬಿ.ಸಿ ರೋಡ್‌, ಬಂಟ್ವಾಳ (ಜುಗಾರಿ ಕೃತ್ಯವನ್ನು ನಡೆಸುತ್ತಿದ್ದಾತ, ಪರಾರಿಯಾಗಿರುತ್ತಾನೆ.), ಅಬ್ದುಲ್‌ ಖಾದರ್‌, ಪ್ರಾಯ: 39 ವರ್ಷ, ಕುವೆಟ್ಟು ಬೆಳ್ತಂಗಡಿ, ಮೊಹಮ್ಮದ್‌ ಹೈದರ್‌, ಪ್ರಾಯ: 40 ವರ್ಷ, ಮೂಡುಪಡುಕೋಡಿ ಬಂಟ್ವಾಳ, ಜೋಸ್‌ ತೋಮಸ್‌, ಪ್ರಾಯ: 51 ವರ್ಷ,ಉಳಿ ಬಂಟ್ವಾಳ,
ಅಬೂಬಕ್ಕರ್‌, ಪ್ರಾಯ: 61 ವರ್ಷ, ಉಜಿರೆ ಬೆಳ್ತಂಗಡಿ, ಲೋಕನಾಥ ಬಂಗೇರ, ಪ್ರಾಯ: 66 ವರ್ಷ, ತೆಂಕಕಜೆಕಾರು ಬಂಟ್ವಾಳ, ತುಕರಾಮ್‌, ಪ್ರಾಯ: 40,ನ್ಯಾಯತರ್ಪು ಬೆಳ್ತಂಗಡಿ, ಅಬ್ದುಲ್‌ ರಹಿಮಾನ್‌, ಪ್ರಾಯ: 74 ವರ್ಷ,ಕುವೆಟ್ಟು ಬೆಳ್ತಂಗಡಿ, ಯಶೋಧರ, ಪ್ರಾಯ: 42 ವರ್ಷ, ಕಾವಳಮೂಡೂರು ಬಂಟ್ವಾಳ, ರಮೇಶ್‌ ಆಚಾರ್ಯ, ಪ್ರಾಯ 52 ವರ್ಷ, ಮಾಲಾಡಿ, ಬೆಳ್ತಂಗಡಿ, ಜಿ.ಎ.ದಾವೂದ್‌, ಪ್ರಾಯ 40 ವರ್ಷ, ಪಡಂಗಡಿ ಬೆಳ್ತಂಗಡಿ, ರಿಯಾಜ್‌ @ ರಿಯಾಜುದ್ದೀನ್‌, ಪ್ರಾಯ 36 ವರ್ಷ, ಲಾಯಿಲ ಬೆಳ್ತಂಗಡಿ, ಮೊಹಮ್ಮದ್‌, ಪ್ರಾಯ 54 ವರ್ಷ, ಪಡಂಗಡಿ ಬೆಳ್ತಂಗಡಿ, ಅಬೂಬಕ್ಕರ್‌ @ ಗುಜುರಿ ಅಬೂಬಕ್ಕರ್, ಪ್ರಾಯ 45 ವರ್ಷ, ಕುವೆಟ್ಟು ಬೆಳ್ತಂಗಡಿ, ಅಬ್ದುಲ್‌ ರವೂಫ್‌, ಪ್ರಾಯ 35 ವರ್ಷ, ಲಾಯಿಲ, ಮುಸ್ತಾಫ, ಪ್ರಾಯ 48 ವರ್ಷ,ಲಾಯಿಲ ಬೆಳ್ತಂಗಡಿ, ಎಂ.ಅಶ್ರಫ್‌, ಪ್ರಾಯ 47 ವರ್ಷ, ಕಾವಳಪಡೂರು ಬಂಟ್ವಾಳ, ರಮೇಶ್‌.ಕೆ, ಪ್ರಾಯ 38 ವರ್ಷ, ಬಜತ್ತೂರು ಪುತ್ತೂರು, ಅಬ್ದುಲ್‌ ರಝಾಕ್‌, ಪ್ರಾಯ 43 ವರ್ಷ,ಪಡಂಗಡಿ ಬೆಳ್ತಂಗಡಿ, ಕಮಲಾಕ್ಷ ದಾಸ್‌, ಪ್ರಾಯ 50 ವರ್ಷ, ಮಾಲಾಡಿ ಬೆಳ್ತಂಗಡಿ, ವಿಜಯ ಕುಮಾರ್, ಪ್ರಾಯ 35 ವರ್ಷ, ಪಡಂಗಡಿ ಬೆಳ್ತಂಗಡಿ, ಮಜೀದ್‌ ಯಾನೆ ಅಬ್ದುಲ್‌ ಮಜೀದ್, ಪ್ರಾಯ 34 ವರ್ಷ, ಕುವೆಟ್ಟು ಬೆಳ್ತಂಗಡಿ, ಶ್ರೀಧರ ಪೂಜಾರಿ, ಪ್ರಾಯ 59 ವರ್ಷ, ಪೆರ್ನೆ ಬಂಟ್ವಾಳ, ಮುನ್ನ @ ಮುಸ್ತಾಫ, ಪ್ರಾಯ 48 ವರ್ಷ, ನಾವುರ ಬಂಟ್ವಾಳ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Exit mobile version