Site icon Suddi Belthangady

ಬೆಳ್ತಂಗಡಿ: ಶ್ರಿ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾ‌ಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಕಾರ್ಯ ಚಟುವಟಿಕೆ ಕಾರ್ಯಕ್ರಮ

ಬೆಳ್ತಂಗಡಿ: ಶ್ರಿ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ರಾ‌ಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ಕಾರ್ಯ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ.ಸವಿತಾ ವಹಿಸಿಕೊಂಡಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರು ರಾಷ್ಟೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಹರಿಪ್ರಸಾದ್ ಎಸ್., ದೀಪ ಪ್ರಜ್ವಲನೆಯ ಮುಖಾಂತರ ಉಧ್ಘಾಟಿಸಿ ಉದ್ಘಾಟನಾ ಮಾತುಗಳನ್ನಾಡಿದರು.

ಗುರುದೇವ ಪದವಿಪೂರ್ವ ಕಾಲೇಜಿನ ಪ್ರಂಶುಪಾಲ ಸುಕೇಶ್ ಕುಮಾರ್ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಹಾಗೂ ವಾಣಿಜ್ಯ ಶಾಸ್ತ್ರ ಉಪನ್ಯಾಸಕ, ಉಪಪ್ರಾಂಶುಪಾಲ ಬಿ.ಎ ಶಮಿವುಲ್ಲಾ ಇವರು ಸ್ವಾಗತಿಸಿ, ಸಹ ಯೋಜನಾಧಿಕಾರಿ ಹಾಗೂ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ವೇತಾ ವ್ಯಕ್ತಿ ಪರಿಚಯವನ್ನು ವಾಚಿಸಿದರು.

ಸಹಯೋಜನಾಧಿಕಾರಿ ಹಾಗೂ ಕನ್ನಡ ಭಾಷಾ ಉಪನ್ಯಾಸಕರಾದ ಸತೀಶ್ ಸಿ ಸಾಲ್ಯಾನ್ ಇವರು ವಂದಿಸಿದರು.ರಾಷ್ಟ್ರೀಯ ಸೇವಾಯೋಜನೆಯ ನಾಯಕ ಮಿಥುನ್, ನಾಯಕಿ ಚಂದನ ಹಾಗೂ ಎಲ್ಲಾ ಸ್ವಯಂ ಸೇವಕರು, ಕಾಲೇಜಿನ ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಉಪನ್ಯಾಸಕ ವೃಂದ, ಕಛೇರಿ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version