ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ ಸೆ.20ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಂಘದ ಅಧ್ಯಕ್ಷ ಲಿಂಗಪ್ಪ ನಾಯ್ಕ ಇವರ ಅಧ್ಯಕ್ಷತೆಯಲ್ಲಿ ಜರಗಿತು.ಸಂಘವು 2023-24ನೇ ಸಾಲಿನಲ್ಲಿ ಸಂಘವು 6 ಕೋಟಿ ವ್ಯವಹಾರ, 2 ಲಕ್ಷ ಲಾಭ ಬಂದಿದೆ.ವರದಿ ಹಾಗೂ ಲೆಕ್ಕಪತ್ರಗಳನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಂತಿ ಮಂಡಿಸಿದರು.
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಕೇಶವ ಇವರಿಗೆ ಕರ್ಮಯೋಗಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗೂ ಪ್ರಮಾಣ ಪತ್ರದೊಂದಿಗೆ ಗೌರವಿಸಲಾಯಿತು.ಹಾಗೂ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸಂತೋಷ್ ನಾಯ್ಕ, ನಿರ್ದೇಶಕರಾದ ಚೆನ್ನಕೇಶವ ನಾಯ್ಕ, ಸೀತಾರಾಮ ಬಿ.ಎಸ್, ಪ್ರಸಾದ್ ನಾಯ್ಕ, ಪ್ರಶಾಂತ್ ನಾಯ್ಕ, ತಾರಾನಾಥ, ಲೀಲಾವತಿ, ಸವಿತಾ ಉಪಸ್ಥಿತರಿದ್ದರು.
ಬ್ಯಾಂಕಿನ ಸಿಬ್ಬಂದಿ ಕಮಾರಿ ಚಂದ್ರಿಕಾ ಪ್ರಾರ್ಥನೆ ಮಾಡಿದರು.ಬ್ಯಾಂಕಿನ ನಿರ್ದೇಶಕ ಸೀತಾರಾಮ ಬಿ.ಎಸ್ ಸ್ವಾಗತಿಸಿ, ಚಿದಾನಂದ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕಿ ಸವಿತಾ ಧನ್ಯವಾದವಿತ್ತರು.