ಉಜಿರೆ: ಉಜಿರೆ ಹಾಲು ಉತ್ಪಾದಕರ ಸಹಕಾರ ಸಂಘದ 2023-23ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.20ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಗೌಡರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘವು ಆರ್ಥಿಕ ವರ್ಷದಲ್ಲಿ ನಿವ್ವಳ ರೂ.7,22,005 ಲಾಭ ಗಳಿಸಿದೆ.
ದ.ಕ. ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಡಿ.ಆರ್.ಸತೀಶ್ ರಾವ್, ದ.ಕ. ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಯಮುನಾ ಒಕ್ಕೂಟದ ವಿವಿಧ ಯೋಜನೆಗಳು ಮತ್ತು ಹೈನುಗಾರಿಕೆ ಕುರಿತು ಮಾಹಿತಿ ನೀಡಿದರು.ಸಂಘದ ಉಪಾಧ್ಯಕ್ಷ ವಿಜಯ ಪೂಜಾರಿ, ನಿರ್ದೇಶಕರುಗಳಾದ ಸತೀಶ್ ಕೆ., ಪುರುಷೋತ್ತಮ ಬಿ.ಎಸ್., ಕೇಶವ, ಕೇಶವ ಗೌಡ, ಅನಿಲ್ ಡಿ’ಸೋಜಾ, ಸಂತೋಷ ಎಂ., ಜಯಶ್ರೀ ಪ್ರಕಾಶ್, ನಾಗವೇಣಿ, ಶಶಿಕಲಾ, ಬೇಬಿ, ಕಿಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೌಮ್ಯಲತಾ ವರದಿ ವಾಚಿಸಿದರು. ನಿರ್ದೇಶಕಿ ಜಯಶ್ರೀ ಪ್ರಕಾಶ್ ಸ್ವಾಗತಿಸಿ, ನಿರ್ದೇಶಕಿ ಶಶಿಕಲಾ ವಂದಿಸಿದರು. ಪ್ರಕಾಶ್ ಗೌಡ ಕ್ರದ್ಲ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಸಭೆಯಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕುವ ಸದಸ್ಯರುಗಳನ್ನು ಹಾಗೂ ಸಂಘದ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.