ಬೆಳಾಲು: ಬೆಳಾಲು ಶ್ರೀ.ಧ.ಮ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ ಸೆ.19ರಂದು ನಡೆಯಿತು.
ಸಭೆಯಲ್ಲಿ ವಿದ್ಯಾರ್ಥಿಗಳ ಶಿಸ್ತು, ಗೈರು ಹಾಜರಾತಿ, ಮೊಬೈಲ್ ಬಳಕೆಯ ನಿಯಂತ್ರಣ, ಮಾದಕ ವ್ಯಸನದ ಬಗೆಗಿನ ಜಾಗೃತಿ, ದ್ವಿ ಚಕ್ರ ವಾಹನಗಳ ಬಳಕೆಯ ಬಗೆಗಿನ ಎಚ್ಚರಿಕೆ, ಅನಗತ್ಯ ಆಹಾರದ ಸೇವನೆ (ಜಂಕ್ ಫುಡ್) ಮುಂತಾದ ವಿಷಯಗಳ ಬಗ್ಗೆ ಜಾಗೃತಿಯ ಮಾತುಗಳನ್ನು ಹಾಗೂ ಶಾಲೆಯ ಪಾಠ ಪ್ರವಚನ, ಶೈಕ್ಷಣಿಕ ಸಾಹಿತ್ಯ ಸಾಧನ ಕಾರ್ಯಕ್ರಮ, ಕ್ರೀಡಾ ಸಾಧನೆಗಳ ಬಗ್ಗೆ ಮಾಹಿತಿಯನ್ನು ನೀಡಿ, ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಆಡಳಿತ ಮಂಡಳಿ ನೀಡಿದ ನಿರ್ದೇಶನ, ಸಹಕಾರ- ಸಹಾಯಗಳನ್ನು ತಿಳಿಸಿ, ವಿದ್ಯಾರ್ಥಿಗಳ ಪ್ರಗತಿಯಲ್ಲಿ ಪೋಷಕರ ಪಾತ್ರದ ಬಗ್ಗೆ ಮುಖ್ಯ ಶಿಕ್ಷಕ ಜಯರಾಮ ಮಯ್ಯ ಮಾಹಿತಿಯನ್ನು ನೀಡಿದರು.
ಎಲ್ಲಾ ಅಧ್ಯಾಪಕ ವೃಂದದವರು ಸಹಕರಿಸಿದರು. ಹೆಚ್ಚಿನ ಸಂಖ್ಯೆಯ ಪೋಷಕರು ಸಭೆಯಲ್ಲಿ ಭಾಗವಹಿಸಿ, ಬಳಿಕ ವಿದ್ಯಾರ್ಥಿಗಳ ಪ್ರಗತಿಯನ್ನು ವೈಯಕ್ತಿಕವಾಗಿ ಶಿಕ್ಷಕರೊಂದಿಗೆ ವಿಶ್ಲೇಷಿಸಿದರು.