ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೃಷಿಕರಾದ ಡೇವಿಡ್ ಜೈಮಿ ಕೊಕ್ಕಡರವರು ಜಲ ಸಂರಕ್ಷಣಾ ವಿಧಾನ, ವಿಚಾರಗಳನ್ನು ಜನರಿಗೆ ತಲುಪಿಸಿ ಅಭಿಯಾನ ಜಾಗೃತಿ ಮೂಡಿಸಿ ಬಹಳಷ್ಟು ಜನರು ಅವರ ಮಳೆ ನೀರು ಕೊಯ್ದು ಫಿಲ್ಟರ್ ಬಳಸಿಕೊಂಡು ಬಾವಿ ಬೋರ್ವೆಲ್‌ಗೆ ಮರುಪೂರಣ ಮಾಡಿ ಅಂತರ್ಜಲ ವೃದ್ಧಿಯಲ್ಲಿ ತೊಡಗಿರುತ್ತಾರೆ.
ಅವರು ಅಳವಡಿಸಿರುವ ಆರು ಜಲ ಸಂರಕ್ಷಣಾ ವಿಧಾನಗಳು ಹಿಂದೆಯೇ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಿಶ್ವದಾಖಲೆಯಾಗಿ ಪ್ರಸಿದ್ದಿಯನ್ನು ಪಡೆದಿರುತ್ತದೆ. ಈಗ ಇನ್ನೂ ಎರಡು ವಿಧಾನಗಳನ್ನು ಹೆಚ್ಚಿಸಿ ತಮ್ಮ ಕೃಷಿ ಭೂಮಿಯಲ್ಲಿ ಎಂಟು ವಿಧಾನಗಳನ್ನು ಅಳವಡಿಸಿದ್ದು ಅಷ್ಟು ವಿಧಾನಗಳು ನೋಬೆಲ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವ ದಾಖಲೆ ಆಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.