Site icon Suddi Belthangady

ಹಾಲು ಉತ್ಪಾದನೆಯಲ್ಲಿ ಪಡಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ದ್ವಿತೀಯ ಸ್ಥಾನ

ಪಡಂಗಡಿ: ದ.ಕ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಹಾಲು ಉತ್ಪಾದನೆಯಲ್ಲಿ ಪಡಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ದ್ವಿತೀಯ ಸ್ಥಾನ ಲಭಿಸಿದೆ. ಬೆಳ್ತಂಗಡಿ ತಾಲೂಕಿನ ಉತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಪಡಂಗಡಿಯ ಹಾಲು ಉತ್ಪಾದಕರ ಸಹಕಾರಿ ಸಂಘವು ಉತ್ತಮ ಎನಿಸಿಕೊಂಡಿದೆ. ಸೆ.18ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಹುಮಾನ ನೀಡಲಾಯಿತು.

ಪ್ರಶಸ್ತಿಯನ್ನು ದ.ಕ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತಾ ಶೆಟ್ಟಿ, ಹಾಗೂ ಎಂ.ಡಿ.ವಿವೇಕ್ ಸಂಘದ ಅಧ್ಯಕ್ಷ ಮ್ಯಾಕ್ಷಿಮ್ ಸಿಕ್ವೇರಾ, ಕಾರ್ಯದರ್ಶಿ ಮೇಬಲ್ ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ಸುಬ್ರಮಣ್ಯ ಭಟ್, ನಿರ್ದೇಶಕರಾದ ವಸಂತ ಪೂಜಾರಿ, ಜಯರಾಜ್ ಬಿ., ಶ್ವೇತಾ, ಅಮಿತಾ ಉಪಸ್ಥಿತರಿದ್ದರು.

Exit mobile version