ರೆಖ್ಯ: ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸೆಪ್ಟೆಂಬರ್ ತಿಂಗಳ ಮಾಸಿಕ ಶ್ರಮದಾನ ರೆಖ್ಯದ ನೇಲ್ಯಡ್ಕ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಶಾಲೆಯಲ್ಲಿ ಪೌಷ್ಟಿಕ ತೋಟ ನಿರ್ಮಾಣ, ತರಕಾರಿ ಬಳ್ಳಿಗಳಿಗೆ ಚಪ್ಪರ, ತೆಂಗು, ಬಾಳೆ ಗಿಡಗಳ ನಾಟಿ ಹಾಗೂ ಬುಡಗಳಿಗೆ ಸೊಪ್ಪು ಹಾಕಲಾಯಿತು.
ಅರಸಿನಮಕ್ಕಿ ವಲಯ ಮೇಲ್ವಿಚಾರಕಿ ಶಶಿಕಲಾರವರ ಮಾರ್ಗದರ್ಶನದಲ್ಲಿ ನಡೆದ ಈ ಶ್ರಮದಾನದಲ್ಲಿ ಸಂಯೋಜಕಿ ರಶ್ಮಿತಾ ಸೇರಿದಂತೆ 13 ಜನ ಸ್ವಯಂಸೇವಕರು ಭಾಗವಹಿಸಿದ್ದರು.ಶಾಲಾ ಮುಖ್ಯೋಪಾಧ್ಯಾಯಿನಿ ವಸಂತಿ, ಅಧ್ಯಾಪಕ ಶ್ರೀಧರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಭವಾನಿಉಪಸ್ಥಿತರಿದ್ದು ಶ್ರಮದಾನದಲ್ಲಿ ಪಾಲ್ಗೊಂಡ ಸ್ವಯಂಸೇವಕರಿಗೆ ಧನ್ಯವಾದ ತಿಳಿಸಿದರು.