ರೆಖ್ಯ: ದಕ್ಷಿಣ ಕನ್ನಡ ಸಂಸದರಾದ ಕ್ಯಾ. ಬ್ರಿಜೇಶ್ ಚೌಟರವರು ಸೆ.17 ರಂದು ರೆಖ್ಯಕ್ಕೆ ಆಗಮಿಸಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಎಂಜಿರ ಮಲ್ನಾಡ್ ಹೋಟೆಲ್ ಸಮೀಪ ಆಗಮಿಸಿದ ಸಂಸದ ಹಾಗೂ ಶಾಸಕರನ್ನು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ನಂತರ ಸಂಸದರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಎಂಜಿರದಲ್ಲಿ ಸರ್ವಿಸ್ ರಸ್ತೆಯ ಕಾಮಗಾರಿಯ ಪರಿಶೀಲನೆಯನ್ನು ನಡೆಸಿದರು. ನಂತರ ಇತ್ತೀಚಿನ ಮಳೆಗೆ ಭೂ ಕುಸಿತಕ್ಕೆ ಒಳಗಾದ ಕೊಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಮಳೆಯಿಂದಾಗಿ ಹಾನಿಯಾದ ದೇವಸ್ಥಾನ ಪರಿಶೀಲನೆ ನಡೆಸಿ, ಅನುದಾನವನ್ನು ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ವೇಳೆ ಸಂಸದರು ಹಾಗೂ ಶಾಸಕ ಹರೀಶ್ ಪೂಂಜರವರನ್ನು ಗುಡ್ರಾದಿ ಹಾಗೂ ಕೊಲಾರು ದೇವಸ್ಥಾನದ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ, ಕೊಲಾರು ದೇವಸ್ಥಾನದ ಅನುವಂಶಿಕ ಮೊಕೇಸರ ರಾಮಯ್ಯ ಗೌಡ ಹಾಗೂ ಗ್ರಾಮಸ್ಥರು ದೇವಳದ ಆವರಣದಲ್ಲಿ ಸನ್ಮಾನಿಸಿದರು. ನಂತರ ಗ್ರಾಮಸ್ಥರು 94ಸಿ ಬಗ್ಗೆ ಮನವಿಯನ್ನು ಸಂಸದರಿಗೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಅರಸಿನಮಕ್ಕಿ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ನವೀನ್ ರೆಖ್ಯ ಬಜರಂಗದಳ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ನಿಕಟಪೂರ್ವ ಕಾರ್ಯದರ್ಶಿ ಕರುಣಾಕರ ಶಿಶಿಲ, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಬೇಬಿ ಕಿರಣ್, ಬಿಜೆಪಿ ಗ್ರಾಮ ಸಮಿತಿ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.