Site icon Suddi Belthangady

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೆರ್ಲ ಕ್ಲಸ್ಟರ್ ನ ಪ್ರತಿಭಾ ಕಾರಂಜಿ

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿಯಲ್ಲಿ 2024-2025 ರ ಸಾಲಿನ ಪೆರ್ಲ ಕ್ಲಸ್ಟರ್ ನ ಪ್ರತಿಭಾ ಕಾರಂಜಿಯು ಸೆ.14ರಂದು ನಡೆಯಿತು. ಇದರ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ವಾಮನ್ ತಾಮನ್ಕರ್ ರವರು ವಹಿಸಿಕೊಂಡಿದ್ದರು.

ಗಣೇಶ್ ಭಿಡೆಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ವಿಲ್ಫ್ರೇಡ್ ಪಿಂಟೊ, ಶಿಕ್ಷಕ ಪ್ರತಿನಿಧಿ ದಾಮೋದರ ಕೆ. ಆಡಳಿತ ಮಂಡಳಿಯ ಸದಸ್ಯರಾದ ಧಮ೯ರಾಜ್‌ ಅಡ್ಕಾಡಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಉಪೇಂದ್ರ, ಗ್ರಾಮ ಅಭಿವೃದ್ಧಿ ಅಧಿಕಾರಿಗಳಾದ ಜಯರಾಜ್, ಶಾಲಾ ಮುಖ್ಯೋಪಾಧ್ಯಾಯರಾದ ಸೀತಾರಾಮ ಗೌಡ, ಸತೀಶ್ ಶೆಟ್ಟಿ ಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳ ಪೋಷಕರು ಶ್ರಮದಾನದ ಮೂಲಕ ಸಹಕರಿಸಿದರು. ಹಾಗೂ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಿದರು.

ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿ ಯ ವಿದ್ಯಾರ್ಥಿಗಳು ಹಿರಿಯ ವಿಭಾಗದಲ್ಲಿ 7 ಪ್ರಥಮ, 1 ದ್ವಿತೀಯ, 1 ತ್ರತೀಯ ಹಾಗೂ ಕಿರಿಯ ವಿಭಾಗದಲ್ಲಿ ಪ್ರಥಮ 5,ದ್ವಿತೀಯ 2, ತೃತೀಯ 1 ಬಹುಮಾನಗಳನ್ನು ಪಡೆದು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಹಿರಿಯ ವಿಭಾಗದಲ್ಲಿ ಸತತ 3ನೇ ಬಾರಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಕಿರಿಯ ವಿಭಾಗದಲ್ಲಿ: ಛದ್ಮವೇಷ: ಭವಿಷ್ ಪ್ರಥಮ., ಚಿತ್ರಕಲೆ: ಹನ್ಸಿತ್ ಪ್ರಥಮ, ಅಭಿನಯ ಗೀತೆ:ಅನುಷ್ಕಾ ಪ್ರಥಮ, ಪ್ಲೇ ಮಾಡೆಲಿಂಗ್: ಯೋಗಿತಾ ಪ್ರಥಮ, ಆಶುಭಾಷಣ: ತೇಜಾಕ್ಷಿ ಪ್ರಥಮ, ಭಕ್ತಿ ಗೀತೆ: ಸ್ಕಂದ ಗೋಖಲೆ ದ್ವಿತೀಯ, ದೇಶಭಕ್ತಿ ಗೀತೆ: ಶಿವಾನಿ ಜೆ ಎಸ್ ದ್ವಿತೀಯ, ಇಂಗ್ಲಿಷ್ ಕಂಠಪಾಠ: ತೇಜಾಕ್ಷಿ ತ್ರತೀಯ.

ಹಿರಿಯ ವಿಭಾಗದಲ್ಲಿ: ದೇಶಭಕ್ತಿ ಗೀತೆ ಹಾಗೂ ಭಕ್ತಿ ಗೀತೆ: ಅದ್ವಿತಿ ಪ್ರಥಮ, ಚಿತ್ರ ಕಲೆ ಹಾಗೂ ಮಿಮಿಕ್ರಿ:ಚೈತೇಶ್ ಪ್ರಥಮ, ಆಶುಭಾಷಣ ಹಾಗೂ ಅಭಿನಯ ಗೀತೆ: ನಿವೇದಿತಾ ಪ್ರಥಮ, ಕೇ ಮಾಡೆಲಿಂಗ್:ಕಿರಣ್ ಪ್ರಥಮ, ಕನ್ನಡ ಕಂಠಪಾಠ:ಸಾತ್ವಿಕ್ ದ್ವಿತೀಯ, ಧಾರ್ಮಿಕ ಪಠಣ ಹರ್ಷಿತ್ ತ್ರತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

Exit mobile version