Site icon Suddi Belthangady

ಬೆಳ್ತಂಗಡಿ: ವಿಶ್ವಕರ್ಮ ಜಯಂತಿ ಆಚರಣೆ

ಬೆಳ್ತಂಗಡಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ವಿಶ್ವಕರ್ಮ ಜಯಂತಿ ಆಚರಣೆಯು ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಸೆ.17ರಂದು ನಡೆಯಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಲ್ಪಕಲೆ ಹಾಗೂ ಕರಕುಶಲತೆಗಳನ್ನು ಒಳಗೊಂಡಿರುವ ಎಲ್ಲಾ ಬಂಧುಗಳನ್ನು ಒಟ್ಟು ಸೇರಿಸಬೇಕು ಎಂಬ ಚಿಂತನೆಯಲ್ಲಿ ನರೇಂದ್ರ ಮೋದಿಯವರು ವಿಶ್ವಕರ್ಮರ ಹೆಸರಿನಲ್ಲಿ ಉತ್ತಮವಾದ ಯೋಜನೆಯನ್ನು ಈ ದೇಶಕ್ಕೆ ಅನುಷ್ಠಾನ ಗೊಳಿಸುವ ಮೂಲಕ ಸಮಾಜದ ಎಲ್ಲಾ ಬಂಧುಗಳಿಗೆ ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ನೂತನ ವಿಶ್ವಕರ್ಮ ಸಭಾಭವನದ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕ ನಿಧಿಯಿಂದ ಸಹಕಾರವನ್ನು ಕೊಡುತ್ತೇನೆ ಎಂದರು.

ಕೇಳದ ಪೇಟೆ ಸ.ಹಿ. ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಪ್ರಶಾಂತ್ ಎ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಅಧ್ಯಕ್ಷ ಗಣೇಶ್‌ ಆಚಾರ್ಯ ಬಲ್ಯಾಯಕೋಡಿ, ಉಪ ತಹಸೀಲ್ದಾ‌ರ್ ರವಿಕುಮಾ‌ರ್ ಉಪಸ್ಥಿತರಿದ್ದರು.

ಹೇಮಾ ಸ್ವಾಗತಿಸಿದರು. ಹೇಮಲತಾ ನಿರೂಪಿಸಿ, ಧನ್ಯವಾದವಿತ್ತರು.

Exit mobile version