Site icon Suddi Belthangady

ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ: ನಿಟ್ಟಡೆ ಕುಂಭಶ್ರೀ ವಿದ್ಯಾಸಂಸ್ಥೆಗೆ ಚಾಂಪಿಯನ್

ನಿಟ್ಟಡೆ: 2023-24ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯು ನಿಟ್ಟಡೆ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ವೇಣೂರು ನಿಟ್ಟಡೆ ಕುಂಭಶ್ರೀ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ಕಾಲೇಜು ಇಲ್ಲಿನ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಪಡೆದಿರುತ್ತಾರೆ.

ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಚಾಂಪಿಯನ್ ಶಿಪ್ ಹಾಗೂ ಕಿರಿಯ ವಿಭಾಗದಲ್ಲಿ ಕುಂಭಶ್ರೀ ವಿದ್ಯಾಸಂಸ್ಥೆಯು ದ್ವಿತೀಯ ಚಾಂಪಿಯನ್ ಶಿಪ್ ಪಡೆದುಕೊಂಡಿದೆ.

ಹಿರಿಯ ವಿಭಾಗ: ಪ್ರಿಯಾ ಕೆಎಸ್- ಭಕ್ತಿ ಗೀತೆ ಮತ್ತು ದೇಶಭಕ್ತಿ ಗೀತೆ ಪ್ರಥಮ, ಸಾನ್ವಿ ಯಂ- ಅಭಿನಯ ಗೀತೆ ಪ್ರಥಮ, ಸಾನ್ವಿ- ಚಿತ್ರಕಲೆ ಪ್ರಥಮ, ಪ್ರೀತಿ ಕೆಎಸ್- ಧಾರ್ಮಿಕ ಪಠಣ ಸಂಸ್ಕೃತ ದ್ವಿತೀಯ, ಚಿನ್ಮಯಿ- ಆಶುಭಾಷಣ ಪ್ರಥಮ, ಸಂಪ್ರೀತ್ ಕ್ಲೇ ಮಾಡಲಿಂಗ್ ದ್ವಿತೀಯ, ಅನನ್ಯ ಕಥೆ ಹೇಳುವುದು ದ್ವಿತೀಯ, ಅಮಿತ್ ಭಾಗ್ ಹಿಂದಿ ಕಂಠಪಾಠ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಕಿರಿಯ ವಿಭಾಗ: ಸಂಜಿತ್- ಆಶುಭಾಷಣ ಪ್ರಥಮ, ಪ್ರಣಿತ್ ಪಿ- ಧಾರ್ಮಿಕ ಪಠಣ, ಸನಾ ಕಾರ್ಲೊ- ಚಿತ್ರಕಲೆ ದ್ವಿತೀಯ, ಸುಪ್ರೀತ್ ಕ್ಲೇ ಮಾಡಲಿಂಗ್- ದ್ವಿತೀಯ, ಇಶಾಂತ್ ಕೆ ಟಿ- ಇಂಗ್ಲೀಷ್ ಕಂಠಪಾಠ ತೃತೀಯ, ಅಝೀಂ- ಅರೇಬಿಕ್ ಪಟ್ಟಣ ತೃತೀಯ, ಮನ್ವಿತ್ ಜಿ ಪಿ- ಭಕ್ತಿಗೀತೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಪವಿತ್ರ, ಹಿರಿಯ ಪ್ರಾಥಮಿಕ ವಿಭಾಗದ ಉಪಮುಖ್ಯ ಶಿಕ್ಷಕಿ ಶುಭ, ಹಿರಿಯ ಪ್ರಾಥಮಿಕ ಶಿಕ್ಷಕಿ ವಾಣಿ, ಮತ್ತು ಚೈತ್ರ ಶ್ರೀ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಭಾಗವಹಿಸಿ ಮಕ್ಕಳಿಗೆ ಸಹಕರಿಸಿದರು.

Exit mobile version