Site icon Suddi Belthangady

ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಉರುವಾಲು ಶ್ರೀ ಭಾರತೀ ಆಂ.ಮಾ.ಪ್ರೌ. ಶಾಲೆಯ ಹಿ.ಪ್ರಾ. ವಿಭಾಗದ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ಪದ್ಮುಂಜ: ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಗೆ ಭಾಜನರಾದರು.

ಭಾಗವಹಿಸಿ ಪ್ರಶಸ್ತಿ ಪಡಕೊಂಡ ವಿದ್ಯಾರ್ಥಿಗಳು: ಕಿರಿಯ ವಿಭಾಗ (1-4)- ಮನ್ವಿತ್ 4ನೇ ತರಗತಿ ಸಂಸ್ಕೃತ ಪಠಣ ಪ್ರಥಮ, ಚಿರಾಗ್ 4ನೇ ತರಗತಿ ಇಂಗ್ಲಿಷ್ ಕಂಠಪಾಠ ದ್ವಿತೀಯ, ಯಶ್ವಿತ್ 4ನೇ ತರಗತಿ ಕಥೆ ಹೇಳುವುದು ದ್ವಿತೀಯ, ಆದ್ಯ 4ನೇ ತರಗತಿ ಅಭಿನಯ ಗೀತೆ ದ್ವಿತೀಯ.

ಹಿರಿಯರ ವಿಭಾಗ (5-7)- ಸಾನಿಧ್ಯ 5ನೇ ತರಗತಿ ಅಭಿನಯ ಗೀತೆ ಮತ್ತು ಭಕ್ತಿಗೀತೆ ಪ್ರಥಮ, ಅಭಿಜ್ಞಾ 6ನೇ ತರಗತಿ ಸಂಸ್ಕೃತ ಪಠಣ ಪ್ರಥಮ, ಸುನ್ನಿಧಿ 6ನೇ ತರಗತಿ ಹಿಂದಿ ಕಂಠಪಾಠ ಪ್ರಥಮ ಮತ್ತು ಕವನ ವಾಚನ ತೃತೀಯ, ದ್ವಿತಿ 5ನೇ ತರಗತಿ ಕಥೆ ಹೇಳುವುದು ದ್ವಿತೀಯ, ಶಮ್ಮಾಸ್ 6ನೇ ತರಗತಿ ಅರೇಬಿಕ್ ಪಠಣ ದ್ವಿತೀಯ, ಪ್ರಚ್ಯಾ 7ನೇ ತರಗತಿ ಇಂಗ್ಲಿಷ್ ಕಂಠಪಾಠ ದ್ವಿತೀಯ, ಅನ್ವಿತಾ 6ನೇ ತರಗತಿ ದೇಶಭಕ್ತಿ ಗೀತೆ ತೃತೀಯ.

Exit mobile version