Site icon Suddi Belthangady

ಸಿಯೋನ್ ಆಶ್ರಮದಲ್ಲಿ ವಿಜೃಂಭಣೆಯ ಓಣಂ ಹಬ್ಬ

ನೆರಿಯ: ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಸೆ.15ರಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಸಾಂಪ್ರದಾಯಿಕವಾಗಿ ಪೂಕಳಂ ಹಾಕಲಾಯಿತು. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯ ಯು.ಸಿ.ಪೌಲೋಸ್‌ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಓಣಂ ಹಬ್ಬದ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು.

ಈ ಹಬ್ಬದಲ್ಲಿ ಸಿಯೋನ್ ಸಂಸ್ಥೆಯ ಆಡಳಿತ ವರ್ಗದವರು, ಕುಟುಂಬಸ್ಥರು, ಸಿಬ್ಬಂದಿವರ್ಗದವರು, ಆಶ್ರಮನಿವಾಸಿಗಳು ಉಪಸ್ಥಿತರಿದ್ದರು. ಸಿಯೋನ್ ಅಶ್ರಮದ ಸಿಬ್ಬಂದಿವರ್ಗದವರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಸಾಂತ್ವನಂ ಕುವೈಟ್ ಇವರ ವತಿಯಿಂದ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು

Exit mobile version