ಪೆರಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಳೆದ 39 ವರ್ಷಗಳಿಂದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಯು. ಶೇಖ್ ಲತೀಫ್ ಬರುವ ಡಿಸೆಂಬರ್ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ಅವರ ಸುದೀರ್ಘ ಸೇವೆಗೆ ಸಂಘವು ಸೆ.15ರಂದು ಪುರಸ್ಕಾರ ಸಮಾರಂಭ ಆಯೋಜಿಸಿದ್ದು, ಸಕಲ ಗೌರವಾಥಿತ್ಯದೊಂದಿಗೆ ಸಂಘದ ವಠಾರದಲ್ಲಿ ಯು.ಶೇಖ್ ಲತೀಫ್ ಅವರನ್ನು ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಪಡ್ಯಾರ ಬೆಟ್ಟದ ಆನುವಂಶೀಯ ಆಡಳಿತ ಮೊಕ್ತೇಸರ ಎ.ಜೀವಂಧರ್ ಕುಮಾರ್, ಮುಖ್ಯ ಅಥಿತಿ ಬೆಂಗಳೂರು ವಿಶ್ವ ವಿದ್ಯಾನಿಲಯದ ಕುಲ ಸಚಿವ ಶೇಖ್ ಲತೀಫ್ ಕೆ.ಎ.ಎಸ್., ಪೆರಾಡಿ ಬೀಡಿನ ರಾಜೇಂದ್ರ ಕುಮಾರ್, ನೋಟರಿ ವಕೀಲ ಬೆಳ್ತಂಗಡಿಯ ಭಗೀರಥ ಜಿ. ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ ಬುಣ್ಣನ್, ಕಾಶಿಪಟ್ಣ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶುಭವಿ, ಶೇಖ್ ಲತೀಫ್ ರವರ ಪತ್ನಿ ಫೌಝಿಯಾ, ಯಶೋಧರ ಆಚಾರ್ಯ, ನಾರಾಯಣ ಭಟ್, ಸುಧಾಕರ ಪೂಜಾರಿ, ಉಪಾಧ್ಯಕ್ಷೆ ದೇವಕಿ ಶೆಟ್ಟಿ, ನಿರ್ದೇಶಕರಾದ ಎನ್.ಸೀತಾರಾಮ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೊ, ಪುತ್ತು ನಾಯ್ಕ, ಹರಿಪ್ರಸಾದ್, ಧರ್ಣಪ್ಪ ಪೂಜಾರಿ, ಸುಜಾತ, ಶ್ರೀಪತಿ ಉಪಾಧ್ಯಾಯ, ರಾಜೇಶ್ ಶೆಟ್ಟಿ, ಕೃಷ್ಣಪ್ಪ, ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ಹೇಮಾ, ರೋಹಿಣಿ, ವೀರೇಂದ್ರ ಕುಮಾರ್, ಮಮತಾ, ಲಕ್ಷ್ಮಣ, ಕವಿತಾ, ರಮ್ಯಾ, ನಳಿನಿ, ಸುಜಿತ್ ಕುಮಾರ್, ಮನೋಜ್ ಕುಮಾರ್, ಹರ್ಷಲಾ ವಿ. ಜೈನ್ ಸಹಕರಿಸಿದರು. ಪಿ.ಕೆ ರಾಜು ಪೂಜಾರಿ, ಜಯಂತ್ ಕೋಟ್ಯಾನ್, ವಿಜಯ ಕುಮಾರ್ ಬಂಗ,ನಿವೃತ್ತ ಶಿಕ್ಷಕ ಪದ್ಮರಾಜ್, ಮರೋಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶುಭರಾಜ್ ಹೆಗ್ಡೆ, ನಿವೃತ್ತ ಅಭಿವೃದ್ಧಿ ಅಧಿಕಾರಿ ವಾಸುದೇವ ನಾಯಕ್, ಕಾಶಿಪಟ್ಣ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶಿಲ್ಪಾ, ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶಿನಿ, ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಂತ್ ಕೃಷ್ಣ ಭಟ್, ಮಹಾವೀರ ಆರಿಗ, ಸಂಜೀವ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರುಗಳು, ನಿರ್ದೇಶಕರು, ಸದಸ್ಯರುಗಳು, ಮರೋಡಿ, ಕಾಶಿಪಟ್ಣ, ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಬಂದ ಅತಿಥಿಗಣ್ಯರನ್ನು ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಸ್ವಾಗತಿಸಿದರು. ಕಾಶಿಪಟ್ಣ ಸರಕಾರಿ ಪ್ರೌಢ ಶಾಲಾ ಶಿಕ್ಷಕ ದೇವದಾಸ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.