Site icon Suddi Belthangady

ಉಜಿರೆ: ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ರಸ್ತೆ ಸುರಕ್ಷತೆ, ಮಾದಕ ವಸ್ತುಗಳ ಪರಿಣಾಮ ಮಾಹಿತಿ ಕಾರ್ಯಾಗಾರ

ಉಜಿರೆ: ಉಜಿರೆ ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಸೆ.13ರಂದು ಜೂನಿಯರ್ ರೆಡ್ ಕ್ರಾಸ್ ವತಿಯಿಂದ ರಸ್ತೆ ಸುರಕ್ಷತೆ ಹಾಗೂ ಮಾದಕ ವಸ್ತುಗಳ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ನಡೆಯಿತು.

ಸಂಚಾರಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಹೆಚ್.ಕೆ. ಇವರು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಪಾಲನೆ ಸುರಕ್ಷಿತ ಚಾಲನೆ ಮತ್ತು ಮಾದಕ ವಸ್ತುಗಳು ಯಾವ ರೀತಿ ಅಡ್ಡ ಪರಿಣಾಮ ಬೀರುತ್ತದೆ ಎನ್ನುವ ವಿಡಿಯೋ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಚಾರಿ ಪೋಲಿಸ್ ಸಿಬ್ಭಂದಿಗಳು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಕೆ.ಸುರೇಶ್ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ನಿಯಮಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು.ಶಿಕ್ಷಕ ರಾಧಕೃಷ್ಣ ಅತಿಥಿಗಳ ಪರಿಚಯ ಮಾಡಿದರು ವಿಶ್ವನಾಥ ಸ್ವಾಗತಿಸಿದರು. ಮೋನಪ್ಪ ವಂದಿಸಿದರು. ಜ್ಞಾನೇಶ್ ಕಾರ್ಯಕ್ರಮ ನಿರೂಪಿಸಿದರು.

Exit mobile version