ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್, ಬೆಂಗಳೂರು ಇಂದಿರಾನಗರ ರೋಟರಿ ಕ್ಲಬ್ ಮತ್ತು ರೋಟರಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ತಾಲೂಕಿನ 258 ವಿದ್ಯಾರ್ಥಿಗಳಿಗೆ ರೂ 10,32,000 ಮೊತ್ತದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಸೆ.14ರಂದು ಬೆಳ್ತಂಗಡಿಯ ರೋಟರಿ ಸಭಾಭವನದಲ್ಲಿ ನಡೆಯಿತು.
ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿರುವ, ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಇದರ ಪ್ರಯೋಜನ ಪಡೆದುಕೊಂಡರು.
ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ವಹಿಸಿದ್ದರು.ರೋಟರಿ ಕ್ಲಬ್ ಇಂದಿರಾನಗರ ಅಧ್ಯಕ್ಷೆ ಸುಪ್ರಿಯಾ ಖಾಂದಾರಿ, ಕಾರ್ಯದರ್ಶಿ ನರಸಿಂಹನ್ ಕಣ್ಣನ್, ರೋಟರಿ ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗ, ಸಹಾಯಕ ಗವರ್ನರ್ ಮಹಮ್ಮದ್ ವಳವೂರು, ಮಾಜಿ ಕಾರ್ಯದರ್ಶಿ ಸುರೇಶ್, ಇಂದಿರಾ ನಗರ ರೋಟರಿ ಕ್ಲಬ್ ವಿದ್ಯಾರ್ಥಿ ವೇತನ ಸಂಚಾಲಕ ರಾಜ ಕೌರ, ಜಗದೀಶ್ ಮುಗುಳಿ, ಶ್ರೀಧರ ಪಡುವೆಟನ್ನಾಯ, ರೋಟರಿ ವಲಯ ಸೇನಾನಿ ಮನೋರಮ ಭಟ್, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಬೆಳ್ತಂಗಡಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ವಕೀಲ ಬಿ.ಕೆ.ಧನಂಜಯ ರಾವ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ಬೆಂಗಳೂರು ಇಂದಿರಾ ನಗರ ರೋಟರಿ ಕ್ಲಬ್ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಉಪನ್ಯಾಸಕರು, ಹೆತ್ತವರು ಹಾಜರಿದ್ದರು.