Site icon Suddi Belthangady

ಶಿಬಾಜೆ: ಪೆರ್ಲ ಅಂಗನವಾಡಿ ಕೇಂದ್ರದಲ್ಲಿ ಪೋಷನ್ ಅಭಿಯಾನ ಕಾರ್ಯಕ್ರಮ

ಶಿಬಾಜೆ: ಪೆರ್ಲ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ ಇದರ ವತಿಯಿಂದ ಪೋಷನ್ ಅಭಿಯಾನ ಕಾರ್ಯಕ್ರಮ ಸೆ.14ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಸಿ ಹೆಚ್ ಒ ಶರಣ್ ರವರು ಮಾತನಾಡಿ ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿ ಸಮತೋಲನ ಆಹಾರ ಸೇವನೆ ವಿವಿಧ ರೀತಿಯ ಸೊಪ್ಪು ತರಕಾರಿಗಳಿಂದ ಸಿಗುವ ಪ್ರೊಟೀನ್ ಗಳ ಅವಶ್ಯ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ವನಿತಾ ವಿ ಶೆಟ್ಟಿಗಾರ್, ಆಶಾ ಕಾರ್ಯಕರ್ತೆ ದಯಾ, ಪೋಷಕ ರೂಪೇಶ್ ಉಪಸ್ಥಿತರಿದ್ದರು.

ಸ್ವಾಗತ ಮತ್ತು ಧನ್ಯವಾದವನ್ನು ಅಂಗನವಾಡಿ ಕಾರ್ಯಕರ್ತೆ ಕುಸುಮ ನೆರವೇರಿಸಿದರು.ಸ್ತ್ರಿ ಶಕ್ತಿ ಸಂಘದ ಸದಸ್ಯೆಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.

Exit mobile version