Site icon Suddi Belthangady

ಕನ್ಯಾಡಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ನೃತ್ಯ ಸ್ಪರ್ಧೆ: ಬೀಟ್ ರಾಕರ್ಸ್ ತಂಡಕ್ಕೆ ಹಲವು ಬಹುಮಾನ

ಕನ್ಯಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ನಡೆಸಿದ ನೃತ್ಯ ಸ್ಪರ್ಧೆಯಲ್ಲಿ ಸುಮಾರು 15 ತಂಡದಲ್ಲಿ ಬೀಟ್ ರಾಕರ್ಸ್ ತಂಡವು ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. ಬೀಟ್ ರಾಕಾರ್ಸ್ ತಂಡದ ಸೀನಿಯರ್ ವಿಭಾಗ ಪ್ರಥಮ ಬಹುಮಾನ ಗಳಿಸಿದರೆ, ಜೂನಿಯರ್ ವಿಭಾಗ ತೃತೀಯ ಬಹುಮಾನ ಪಡೆದುಕೊಂಡಿದೆ. ಅದೇ ರೀತಿ ಉಜಿರೆಯಲ್ಲಿ 18 ತಂಡದೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡ ತಂಡ ದ್ವಿತೀಯ ಸ್ಥಾನ ಪಡೆದಿದ್ದು , ಚಾರ್ಮಾಡಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಜೂನಿಯರ್ ವಿಭಾಗ ದ್ವಿತೀಯ, ಹಾಗೂ ಸೀನಿಯರ್ ವಿಭಾಗ ತೃತೀಯ ಸ್ಥಾನ ಗೆದ್ದು ಬಹುಮಾನ ಗಳಿಸಿದ್ದಾರೆ.

Exit mobile version