Site icon Suddi Belthangady

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಮೈರೋಳ್ತಡ್ಕ ಸ.ಉ.ಹಿ.ಪ್ರಾ.ಶಾಲಾ ತಂಡಕ್ಕೆ ಪ್ರಶಸ್ತಿಯ ಗರಿ

ಬಂದಾರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ಸಮೂಹ ಸಂಪನ್ಮೂಲ ಕೇಂದ್ರ ಕುಪ್ಪೆಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪದ್ಮುಂಜ ಇವುಗಳ ಸಹಾಭಾಗಿತ್ವದಲ್ಲಿ ಸೆ.13ರಂದು ನಡೆದ ಪದ್ಮುಂಜ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ 2024 ಇದರಲ್ಲಿ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಬಾಲಕ, ಬಾಲಕಿಯರ ತಂಡದ ಕಿರಿಯ ವಿಭಾಗದಲ್ಲಿ ಪ್ರಥಮ ಹಾಗೂ ಹಿರಿಯ ವಿಭಾಗ ದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಮುಡಿಗೆರಿಸಿಗೊಂಡಿದೆ.

Exit mobile version