Site icon Suddi Belthangady

ಉಜಿರೆ: ಎಸ್‌.ಡಿ.ಎಂ ಐಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶೋಭಾ ಪಿ ಜೀವಂದರ್‌ ರಿಗೆ ಪಿ.ಎಚ್‌.ಡಿ ಪದವಿ

ಉಜಿರೆ: ಎಸ್‌.ಡಿ.ಎಂ ಐಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶೋಭಾ ಪಿ. ಜೀವಂದ‌ರ್ ಅವರು “ಮೆಥಮ್ಯಾಟಿಕಲ್ ಮೋಡಲಿಂಗ್ ಆಫ್ ನ್ಯಾನೋಫುಡ್ಸ್ (Mathematicals Modelling of Nanofluids)” ಎಂಬ ಶೀರ್ಷಿಕೆಯೊಂದಿಗೆ ತಮ್ಮ ಪಿಎಚ್‌ಡಿ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಈ ಶೋಧನೆಯನ್ನು ಎಮ್ ಎಸ್ ಆರ್ ಐ ಟಿ, ಬೆಂಗಳೂರಿನ ಪ್ರಾಧ್ಯಾಪಕ ಡಾ.ಜಿ.ನೀರಜಾ ಮತ್ತು ಎಸ್ ಡಿ ಎಮ್ ಐ ಟಿ, ಉಜಿರೆಯ ಮೆಥಮಟಿಕ್ಸ್ ವಿಭಾಗದ ಮುಖ್ಯಸ್ಥ ಡಾ.ವಿದ್ಯಾ ಕೆ. ಅವರ ಮಾರ್ಗದರ್ಶನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(VTU), ಬೆಳಗಾವಿ ಅಡಿಯಲ್ಲಿ ಪಿಎಚ್‌ಡಿ ಪದವಿ ಪಡೆದಿರುತ್ತಾರೆ.

ಇವರು ಕೊಕ್ಕಡ ಕಪಿಲ ಜೇಸಿ ಅಧ್ಯಕ್ಷ ಸಂತೋಷ್ ಜೈನ್ ವಳಂಬಳ ಕಳೆಂಜ ರವರ ಪತ್ನಿ ಹಾಗೂ ಇವರು ಕೊಕ್ಕಡ ಕಪಿಲ ಮಹಿಳಾ ಜೇಸಿಯ ಅಧ್ಯಕ್ಷೆಯಾಗಿದ್ದಾರೆ.

Exit mobile version