ಉಜಿರೆ: ಉಜಿರೆ ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನ ವಿಚಾರ ಸಂಕಿರಣ ಮತ್ತು ವಿಜ್ಞಾನ ನಾಟಕ ಸ್ಪರ್ಧೆಗಳು ಸೆ.12ರಂದು ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತಾಡಿ ಹಳ್ಳಿಯ ಜೀವನ ಶೈಲಿ ಅನುಭವ ಹಾಗೂ ಈಗಿನ Artfical Intelijence(AI) ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳು “ಕತ್ತಲನ್ನು ಹೋಗಲಾಡಿಸುವ ದೀಪ ನೀವಾಗಿ“ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜ್ಞಾನ ವಿಷಯ ವೇದಿಕೆಯ ಅಧ್ಯಕ್ಷ ರಾಧಕೃಷ್ಣ ಕೆ. ಇವರು ಸ್ವ ಉದ್ಯೋಗದ ಕಡೆಗೆ ಗಮನ ಕೊಡಿ ಎಂದರು. ಪ್ರೌಢ ಶಾಲಾ ಶಿಕ್ಷಣ ಸಂಯೋಜಕರು ಹಾಗೂ ಕಾರ್ಯಕ್ರಮದ ನೋಡಲ್ ಅಧಿಕಾರಿ ಸಿದ್ಧಲಿಂಗಸ್ವಾಮಿ ಮಾತಾಡಿ, ಸ್ವಚ್ಛತೆಯ ಬಗ್ಗೆ ನಮ್ಮ ಮನೆ ಪರಿಸರ ಸುತ್ತಮುತ್ತಲಿನ ವಾತಾವರಣದ ಸ್ವಚ್ಛತೆಯನ್ನು ಕೃತಕ ಬುದ್ಧಿವಂತಿಕೆಯನ್ನು ಉಪಯೋಗಿಸಿ ಯಾವ ರೀತಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬಹುದು ಎನ್ನುವ ಮಾಹಿತಿ ನೀಡಿದರು.
ಪ್ರೌಢ ಶಾಲಾ ಶಿಕ್ಷಣ ಸಂಯೋಜಕಿ ಚೇತನಾಕ್ಷಿ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರತಿಮಾ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಕೆ.ಸುರೇಶ್ ಸ್ವಾಗತಿಸಿದರು. ಸರಕಾರಿ ಪ್ರೌಢಶಾಲೆ ಬದನಾಜೆಯ ಶಿಕ್ಷಕ ರಾಮಕೃಷ್ಣ ಭಟ್ ವಂದಿಸಿದರು.ರವೀಶ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.