Site icon Suddi Belthangady

ಮಡಂತ್ಯಾರು: ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ- ರೂ.9.21ಲಕ್ಷ ಲಾಭ, ಸದಸ್ಯರಿಗೆ ಶೇ.65 ಬೋನಸ್, ಶೇ.25 ಡಿವಿಡೆಂಡ್ ಘೋಷಣೆ

ಮಡಂತ್ಯಾರು: ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ವಠಾರದಲ್ಲಿ ಸೆ.13ರಂದು ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದಲ್ಲಿ ಒಟ್ಟು ರೂ.9.21ಲಕ್ಷ ಲಾಭ ಗಳಿಸಿ, ಸದಸ್ಯರಿಗೆ ಶೇ.65 ಬೋನಸ್, ಶೇ.25 ಡಿವಿಡೆಂಡ್ ಘೋಷಿಸಿದರು.

ದ.ಕ.ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸುರೇಶ್ ರಾವ್, ವಿಸ್ತರಣಾಧಿಕಾರಿ ಸುಚಿತ್ರಾ, ಸಂಘದ ಬಗ್ಗೆ ಮಾಹಿತಿ ಸಲಹೆ ಸೂಚನೆಗಳನ್ನು ನೀಡಿದರು. ಪಶು ವೈದ್ಯಾಧಿಕಾರಿ ಡಾ.ಪೂಜಾ ಪಶುಗಳ ಪೋಷಣೆ, ಹಾಲಿನ ಇಳುವರಿ ಯಾವ ರೀತಿಯಲ್ಲಿ ಹೆಚ್ಚಿಸುವ ಬಗ್ಗೆ, ಕರು ರಕ್ಷಣೆ, ಪಶು ಆಹಾರ ಯಾವ ರೀತಿಯಲ್ಲಿ ಉಪಯೋಗಿಸುವ ಬಗ್ಗೆ, ಪಶುಗಳಿಗೆ ಔಷದಿ ಬಳಸುವ ಬಗ್ಗೆ ಮತ್ತು ಒಕ್ಕೂಟ ದಿಂದ ಸಿಗುವ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಅಶೋಕ್ ಕೆ.ಎಸ್, ನಿರ್ದೇಶಕರುಗಳಾದ ಎಂ.ಮಂಜಯ್ಯ ಶೆಟ್ಟಿ, ರಾಮಕೃಷ್ಣ ಹೆಬ್ಬಾರ್, ಸದಾಶಿವ ಶೆಟ್ಟಿ, ವೆಂಕಪ್ಪ ಪೂಜಾರಿ, ಕೇಶವ ಮೂಲ್ಯ, ಸುನೀಂದ್ರ ಪೂಜಾರಿ, ಪ್ರವೀಣ್ ಚಂದ್ರ ಶೆಟ್ಟಿ, ಆಗ್ನೆಸ್ ಎಮ್. ಫ್ರಾಂಕ್, ಸವಿತಾ ಯು. ಬಂಗೇರ, ಗಿರಿಯಪ್ಪ ನಾಯ್ಕ, ಸವಿತಾ ಸುರೇಶ್ ಉಪಸ್ಥಿತರಿದ್ದರು.ಸಂಘದ ಎಲ್ಲಾ ಸದಸ್ಯರಿಗೆ ಪ್ರೋತ್ಸಹಕ ಬಹುಮಾನ ವಿತರಿಸಲಾಯಿತು.

ಉಪಾಧ್ಯಕ್ಷ ಅಶೋಕ್ ಕೆ. ಎಸ್ ಸ್ವಾಗತಿಸಿ, ನಿರ್ದೇಶಕ ಪ್ರವೀಣ್ ಚಂದ್ರ ವಂದಿಸಿದರು. ಕಾರ್ಯದರ್ಶಿ ಜಿ. ಬಾಲಕೃಷ್ಣ ವರದಿ, ಲೆಕ್ಕ ಪತ್ರ ಮಂಡಿಸಿದರು. ಸಿಬ್ಬಂದಿ ಅಶೋಕ್‌ ಗುಂಡಿಯಲ್ಕೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ವಸಂತ ಪೂಜಾರಿ, ಕೇಶವತಿ ಸಹಕರಿಸಿದರು. ಸದಸ್ಯರು ಉಪಸ್ಥಿತರಿದ್ದರು.

Exit mobile version