Site icon Suddi Belthangady

ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ಧ.ಮಂ.ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಗೆ ಹನ್ನೆರಡು ಬಹುಮಾನ

ಉಜಿರೆ: ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೊಂಪದಪಲ್ಕೆ, ಇವರ ಸಂಯುಕ್ತಾಶ್ರಯದಲ್ಲಿ ಸೆ.12ರಂದು ನಡೆದ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಇಲ್ಲಿನ ಶ್ರೀ ಧ. ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯು ಹಲವು ಬಹುಮಾನಗಳನ್ನು ಗೆದ್ದುಕೊಂಡಿದೆ.

ಕಿರಿಯ ಪ್ರಾಥಮಿಕ ವಿಭಾಗ(1 ರಿಂದ 4 ನೇ ತರಗತಿ): ಅಭಿನಯ ಗೀತೆ ಸಾನ್ವಿ ಎಂ.ಕೆ ಪ್ರಥಮ ಬಹುಮಾನ ಗೆದ್ದಿದ್ದಾರೆ.

ಚಿರಾಗ್ ಎಲ್.ಕೆ (ಕಂಠಪಾಠ ಇಂಗ್ಲೀಷ್), ಧ್ರುವ ಹೆಗ್ಡೆ (ಧಾರ್ಮಿಕ ಪಠಣ ಸಂಸ್ಕೃತ), ನಿಶಿಕಾ ವೈ ಪುಜಾರಿ (ಸಂಸ್ಕೃತ ದೇಶಭಕ್ತಿ ಗೀತೆ), ಸಾನ್ವಿ (ಆಶು ಭಾಷಣ) ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಹಿರಿಯ ಪ್ರಾಥಮಿಕ ವಿಭಾಗ(5 ರಿಂದ 7 ನೇ ತರಗತಿ): ಅಚಲ (ಕಂಠಪಾಠ ಇಂಗ್ಲೀಷ್), ಅದ್ವಿತಿ ರಾವ್ (ಧಾರ್ಮಿಕ ಪಠಣ ಸಂಸ್ಕೃತ), ಮಹಮ್ಮದ್ ಅನಾಸ್ (ಧಾರ್ಮಿಕ ಪಠಣ ಅರೇಬಿಕ್),
ಅದಿತಿ (ದೇಶಭಕ್ತಿ ಗೀತೆ),ಪ್ರಥಮ ಬಹುಮಾನ ಗೆದ್ದಿದ್ದಾರೆ.

ಹರೀಶ್ ಪಟೇಲ್ ಕಂಠಪಾಠ ಹಿಂದಿ, ವೈಭವ್ ರಾವ್ ಭಕ್ತಿ ಗೀತೆ, ಸಂಹಿತಾ ಅಭಿನಯ ಗೀತೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.

Exit mobile version