ಮಾಲಾಡಿ: ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಕೌಶಲ್ಯದ ಮೂಲಕ ದೇಶದ ಮರು ನಿರ್ಮಾಣದ ಇದರ ತರಬೇತಿ ಕಾರ್ಯಗಾರನ್ನು ಸೆ.11ರಂದು ಬೆಳಿಗ್ಗೆ ಸರಕಾರಿ ಕೈಗಾರಿಕೆ ಮಾಲಾಡಿ ಬೆಳ್ತಂಗಡಿ ಇಲ್ಲಿ ಸಂಸ್ಥೆಯ ಪ್ರಾಚಾರ್ಯ ರಮೇಶ್ ನಾಯ್ಕ ಇವರು ಫಲಾನುಭವಿಗಳನ್ನು ಸ್ವಾಗತಿಸುವ ಮೂಲಕ ಮಾತನಾಡಿದರು.
ಈ ಯೋಜನೆಯ ಸವಲತ್ತುಗಳನ್ನು ಬಗ್ಗೆ ವಿವರಿಸಿದರು.ಮೂರು ಲಕ್ಷದವರೆಗೆ ಅಸುರಕ್ಷಿತ ಸಾಲ 15,000 ಸಾವಿರದ ಕಿಟ್ ಇನ್ನಿತರ ನೆರವಿನ ಬಗ್ಗೆ ವಿವರವಾಗಿ ಹೇಳಿದರು.ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಲಯದ ಟೈಲರ್ಸ್ ಅಸೋಸಿಯನ್ ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ಹರೀಶ್ ಟೈಲರ್, ಎಫ್.ಡಿ.ಎ. ಶರಣ್ಯ, ಜೆ.ಐ.ಒ ಕುಸುಮಾವತಿ ಉಪಸ್ಥಿತರಿದ್ದರು.