Site icon Suddi Belthangady

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ: ನಡ ಸರಕಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಸ್ಥಾನ

ನಡ: ಬೆಳ್ತಂಗಡಿ ತಾಲೂಕು ಮಟ್ಟದ ಬಾಲಕರ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾವಳಿಯು ಪ್ರಸನ್ನ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿತು. ಬಾಲಕರ ವಿಭಾಗದಲ್ಲಿ ನಡ ಸರಕಾರಿ ಪದವಿ ಪೂರ್ವ ಕಾಲೇಜಿನ ಕಬಡ್ಡಿ ಪಂದ್ಯಾಳುಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಎಸ್.ಡಿ.ಯಂ.ಪದವಿ ಪೂರ್ವ ಕಾಲೇಜಿನ ತಂಡ ಪ್ರಥಮ ಸ್ಥಾನಿಯಾಗಿದೆ.ತಾಲೂಕಿನ ವಿವಿಧ ಕಾಲೇಜುಗಳ 15 ತಂಡಗಳು ಇದರಲ್ಲಿ ಭಾಗವಹಿಸಿದ್ದವು.ಕಿಶನ್ ಕುಮಾರ್ “ಅತ್ಯುತ್ತಮ ದಾಳಿಗಾರ” ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.ದೈಹಿಕ ಶಿಕ್ಷಕರ ಹುದ್ದೆಯೇ ಇಲ್ಲದ ಸರಕಾರೀ ಕಾಲೇಜಿನ ಗ್ರಾಮೀಣ ಮಕ್ಕಳ ಏಕಲವ್ಯ ಸಾಧನೆಗೆ ಇದು ಸಾಕ್ಷಿಯಾಗಿದೆ.

Exit mobile version