ಗುರಿಪಳ್ಳ: ಜಯನಗರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 48ನೇ ವರ್ಷದ ಗಣೇಶೋತ್ಸವದ ಕಾರ್ಯಕ್ರಮಗಳು ಸೆ.7ರಿಂದ 9ರ ತನಕ ಸಡಗರ ಸಂಭ್ರಮದಿಂದ ನೆರವೇರಿತು.
ಮೊದಲ ದಿವಸ ದೇವರ ಪ್ರತಿಷ್ಠಾಪನೆ ಮಾಡಿ ನಂತರ ಊರವರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎರಡನೇ ದಿವಸ ಆಹ್ವಾನಿತ ತಂಡಗಳಿಂದ ಕುಣಿತಾ ಭಜನಾ ಸ್ಪರ್ಧೆ ಏರ್ಪಡಿಸಲಾಯಿತು.ಜೊತೆಗೆ ಸಂಜೆ 7.00 ಗಂಟೆಯಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಜೇಶ್ ಅಚಾರ್ಯ ಸವಣಾಲು ವಿರಚಿತ ‘ಪದ್ದು ಪನುವೆನಾ’ ತುಳು ಹಾಸ್ಯಮಯ ನಾಟಕ ಶ್ರೀ ಸಿದ್ದಿವಿನಾಯಕ ಕಲಾ ತಂಡ ಗುರಿಪಳ್ಳ ಇವರಿಂದ ನೆರವೇರಿತು.
ಮೂರನೇ ದಿನ ಮದ್ಯಾಹ್ನ ಧಾರ್ಮಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಿಸಲಾಯಿತು. ಸಂಜೆ ಕುಣಿತ ಭಜನೆ, ಹುಲಿವೇಷ ಗೊಂಬೆಗಳನ್ನು ಒಳಗೊಂಡ ವೈಭವದ ಶೋಭಾಯಾತ್ರೆ ಶ್ರೀ ಲೋಕನಾಥೇಶ್ವರ ದೇವಾಸ್ಥಾನದ ಮುಂಬಾಗದಲ್ಲಿರುವ ಪವಿತ್ರವಾದ ನೇತ್ರಾವತಿ ನದಿಯಲ್ಲಿ ದೇವರ ವಿಸರ್ಜನೆ ಮೂಲಕ ನೆರವೇರಿತು.