Site icon Suddi Belthangady

ಉಜಿರೆ: ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ 

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆರವರು ಉಜಿರೆಯ ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ “ಜ್ಞಾನ ವಾಹಿನಿ” ಎಂಬ ಶೀರ್ಷಿಕೆಯಲ್ಲಿ ಶುಭಾರಂಭಗೊಂಡಿರುವ ಸಂಚಾರಿ ಗ್ರಂಥಾಲಯ ಬಸ್ಸಿನಲ್ಲಿ ಧರ್ಮಸ್ಥಳದಿಂದ ಉಜಿರೆ ಶಾಲೆಗೆ ಸೆ.11ರಂದು ಭೇಟಿ ನೀಡಿದರು.

ಭೇಟಿಯ ವೇಳೆ ಶಾಲೆಯ ಮಕ್ಕಳೊಂದಿಗೆ ಪ್ರತಿ ತರಗತಿಗಳಿಗೂ ಭೇಟಿ ನೀಡಿ ಸಂವಾದ ನಡೆಸಿ, ಶಾಲಾ ಪ್ರಗತಿಪರ ಚಿಂತನೆಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು.

Exit mobile version