Site icon Suddi Belthangady

ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಹರ್ಷಿತಾ ಆಯ್ಕೆ

ಉಜಿರೆ: ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪದವಿಪೂರ್ವ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಬೆಂಗಳೂರಿನ ಗಾಂಧೀ ಭವನದಲ್ಲಿ ಸೆ.17ರಿಂದ 23ರವರೆಗೆ ನಡೆಯುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಸ್ವಯಂ ಸೇವಕಿ ಹರ್ಷಿತಾ ಆಯ್ಕೆಯಾಗಿದ್ದಾರೆ.

ಇವರು ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ರಾಜ್ಯ ಮಟ್ಟದ ಯೋಗ ಸ್ಪರ್ಧಾಪಟು ಕೂಡ ಆಗಿದ್ದಾರೆ.ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವುದರೊಂದಿಗೆ ಪ್ರಬಂಧ ಬರಹ, ಪೋಸ್ಟರ್ ರಚನೆ, ಏಕಪಾತ್ರಾಭಿನಯ, ನೃತ್ಯ, ಪ್ರಹಸನ, ಕಾರ್ಯಕ್ರಮ ನಿರ್ವಹಣೆ ಇತ್ಯಾದಿಗಳಲ್ಲಿಯೂ ತೊಡಗಿಸಿಕೊಂಡಿದ್ದು, ಪ್ರೌಢಶಾಲೆಯ ಎನ್ ಸಿ ಸಿ ಯಲ್ಲಿ ಸಾರ್ಜೆಂಟ್ ಕೂಡ ಆಗಿದ್ದ ಉಜಿರೆಯ ರೆಂಜಾಳ ಅಣ್ಣು ನಾಯ್ಕ್ ಹಾಗೂ ಸುಶೀಲಾ ದಂಪತಿಯ ಪುತ್ರಿ.

Exit mobile version