Site icon Suddi Belthangady

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಕರ ದಿನಾಚರಣೆ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಜೊತೆ ಕಾರ್ಯದರ್ಶಿಗಳಾದ ವಂ|ಡಾ|ಸ್ಟ್ಯಾನಿ ಗೋವಿಯಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದೇಶದ ಅತ್ಯಮೂಲ್ಯ ಸಂಪನ್ಮೂಲವಾದ ಯುವಶಕ್ತಿಯನ್ನು ಭವಿಷ್ಯದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯ.ಶಿಕ್ಷಕರ ಆದರ್ಶ ವ್ಯಕ್ತಿತ್ವವೇ ವಿದ್ಯಾರ್ಥಿಗಳಿಗೆ ಮಾದರಿ. ವಿದ್ಯಾರ್ಥಿಗಳು ತಮ್ಮ ಗುಣನಡತೆಯಲ್ಲಿ ಶಿಸ್ತು, ಸಂಯಮ,ಸಮಯ ಪ್ರಜ್ಞೆಯನ್ನು ಅಳವಡಿಸಿಕೊಂಡು ಸತ್ಪ್ರಜೆಗಳಾದಲ್ಲಿ ಶಿಕ್ಷಣದ ಆಶಯವು ಪರಿಪೂರ್ಣವಾಗುತ್ತದೆ.ಶ್ರೇಷ್ಠ ಶಿಕ್ಷಕರು ಮೇಣದಬತ್ತಿ ಇದ್ದಂತೆ, ಬೇರೆಯವರ ಬಾಳಲ್ಲಿ ಬೆಳಕು ಮೂಡಿಸಲು ತಾವೇ ಕರಗುತ್ತಾರೆ ಎಂದು ಅವರು ಹೇಳಿದರು.

ಗಾರ್ಡಿಯನ್ ಏಂಜಲ್ಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹೆಲೆನ್ ಲೋಬೊ, ಸೇಕ್ರೆಡ್ ಹಾರ್ಟ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸೂರಜ್ ಚಾರ್ಲ್ಸ್, ಪ್ರಭಾರ ಮುಖ್ಯ ಶಿಕ್ಷಕಿ ಶಾಂತಿ ಮೇರಿ ಡಿ’ಸೋಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ಪ್ರಾಂಶುಪಾಲ ಅಲೆಕ್ಸ್ ಐವನ್ ಡಿಸೋಜಾ ಸ್ವಾಗತಿಸಿದರು.ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ವಂ| ದೀಪಕ್ ಲಿಯೋ ಡೇಸಾ ವಂದಿಸಿದರು, ಉಪನ್ಯಾಸಕಿ ವಿಲ್ಮಾ ಅಶ್ವಿನಿ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಂಸ್ಥೆಯ ಬೋಧಕ -ಬೋಧಕೇತರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು.

Exit mobile version