Site icon Suddi Belthangady

ಕಾಜೂರಿನಲ್ಲಿ ಖಾಝಿ ಕೂರತ್ ತಂಙಳ್ ಅನುಸ್ಮರಣೆ, ಮಾಸಿಕ ಸ್ವಲಾತ್- ಕೂರತ್ ತಂಙಳ್ ಅವರು ಆಧ್ಯಾತ್ಮಿಕತೆ ಮೈಗೂಡಿ ಜೀವಿಸಿದ್ದ: ಕೆ.ಸಿ ರೋಡ್ ಹುಸೈನ್ ಸ‌ಅದಿ

ಬೆಳ್ತಂಗಡಿ: ಕರ್ನಾಟಕ ರಾಜ್ಯದ ಬಹುತೇಕ ಕಡೆಗಳಲ್ಲಿ ಇಸ್ಲಾಂ ನ ಪ್ರಭೆ ಪಸರಿಸಿದ್ದ ಸಯ್ಯಿದ್ ತಾಜುಲ್ ಉಲಮಾ ಉಳ್ಳಾಳ ತಂಙಳ್ ಅವರ ಸುಪುತ್ರರಾಗಿ ಕೂರತ್ ತಂಙಳ್ ಅವರು ಲೌಖಿಕ ಬದುಕಿನಿಂದ ಬಹುದೂರ ಇದ್ದು ಕೇವಲ ಆಧ್ಯಾತ್ಮಿಕತೆಯನ್ನೇ ಮೈಗೂಡಿಸಿಕೊಂಡು ಜೀವಿಸಿದ್ದ ಮಹಾನ್ ಪಂಡಿತರಾಗಿದ್ದರು ಎಂದು ಸ‌ಅದಿಯಾ ಕಾಲೇಜಿನ ಪ್ರಾಚಾರ್ಯ ಕೆ.ಸಿ.ರೋಡ್ ಹುಸೈನ್ ಸ‌ಅದಿ ಹೇಳಿದರು.

ಕಾಜೂರು ಆಡಳಿತ ಸಮಿತಿ ವತಿಯಿಂದ ಕಾಜೂರಿನಲ್ಲಿ‌ ನಡೆದ ಸಯ್ಯಿದ್ ಕೂರತ್ ತಂಙಳ್ ಅನುಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಸಯ್ಯುದ್ ಕಾಜೂರು ತಂಙಳ್ ಅವರು ಮಾಸಿಕ ಸ್ವಲಾತ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ವಿಶೇಷ ದುಆ ಪ್ರಾರ್ಥನೆ ನಡೆಸಿಕೊಟ್ಟರು.ಅಧ್ಯಕ್ಷತೆಯನ್ನು ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದರು.

ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉದ್ಘಾಟನೆ ನೆರವೇರಿಸಿದರು.

ವೇದಿಕೆಯಲ್ಲಿ ಕಾಜೂರು ಮುದರ್ರಿಸ್ ತೌಸೀಫ್ ಸ‌ಅದಿ ಹರೇಕಳ, ವಿವಿಧ ಜಮಾಅತ್ ಗಳ ಪ್ರಮುಖರಾದ ಯು.ಕೆ ಮುಹಮ್ಮದ್ ಹನೀಫ್ ಉಜಿರೆ, ಅಬ್ದುಲ್ ಹಮೀದ್ ನೆಕ್ಕರೆ ಮುಂಡಾಜೆ, ಅಶ್ರಫ್ ಆಲಿಕುಂಞಿ ಮುಂಡಾಜೆ, ಹನೀಫ್ ಲಾಯಿಲ, ಅನ್ಸಾರ್ ಲಾಯಿಲ, ಆದಂ ಬೆಳಾಲು, ರಶೀದ್ ಮದನಿ ಇಂದಬೆಟ್ಟು, ಅಬ್ದುಶ್ಶುಕೂರು ಗಾಂಧಿನಗರ ಕಕ್ಕೆಜಾಲು, ಪಿ.ಯು ಅಬ್ದುಲ್ ರಹಿಮಾನ್ ಮುಸ್ಲಿಯಾರ್ ನಾವೂರು,
ಕಾಜೂರು ಆಡಳಿತ ಸಮಿತಿ ಮಾಜಿ ಅಧ್ಯಕ್ಷರುಗಳಾದ ಕೆ.ಯು ಉಮರ್ ಸಖಾಫಿ, ಬಿ. ಎ ಯೂಸುಫ್ ಶರೀಫ್, ಪಿ.ಎ ಮುಹಮ್ಮದ್, ಇಬ್ರಾಹಿಂ ಮದನಿ, ಜೆ.ಹೆಚ್ ಅಬ್ಬಾಸ್, ಕಾಜೂರು ಆಡಳಿತ ಕಮಿಟಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್, ಉಪಾಧ್ಯಕ್ಷ ಬದ್ರುದ್ದೀನ್ ಕಾಜೂರು ಮೊದಲಾದವರು ಉಪಸ್ಥಿತರಿದ್ದರು.

Exit mobile version