ಮೇಲಂತಬೆಟ್ಟು: ಮೇಲಂತಬೆಟ್ಟು ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾ.ಪಂ.ಅಧ್ಯಕ್ಷೆ ಸವಿತಾರವರ ಅಧ್ಯಕ್ಷತೆಯಲ್ಲಿ ಸೆ.10ರಂದು ಸವಣಾಲು ರಾಧಾಕೃಷ್ಣ ಸಭಾಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೀಯಾ ಆಗ್ನೇಸ್ ಆಗಮಿಸಿದ್ದರು.
ಸಭೆಯಲ್ಲಿ ಕೋರಂ ಕೊರತೆ ಇದ್ದ ಕಾರಣ 64 ಗ್ರಾಮಸ್ಥರು ಮಾತ್ರ ಹಾಜರಾಗಿದ್ದರು. ಕನಿಷ್ಠ ಪಕ್ಷ 100 ಗ್ರಾಮಸ್ಥರು ಇರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ ಮೇರೆಗೆ ಅಧ್ಯಕ್ಷೆ ಸವಿತಾ ಗ್ರಾಮ ಸಭೆಯನ್ನು ಮೂಂದೂಡಿದರು.
ಆದರೆ ಗ್ರಾಮ ಸಭೆಯ ಸಲುವಾಗಿ 100 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಹಿಂದೆ 20/40 ಮಂದಿಯಿದ್ದರು ಗ್ರಾಮ ಸಭೆ ನಡೆದಿದೆ, ಆದರೆ ಇದೀಗ ಯಾಕೆ ಹೀಗಾಯಿತು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಪಿಡಿಓ ಶ್ರೀಧರ್ ಹೆಗ್ಡೆ ವರದಿ ವಾಚಿಸಿದರು. ಸದಸ್ಯ ಸಂತೋಷ್ ಕುಮಾರ್ ಸ್ವಾಗತಿಸಿದರು.