ಧರ್ಮಸ್ಥಳ: ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಯಲ್ಲಿ ಗಣೇಶೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.ದೇವರ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಹಾಗೂ ಭಜನೆಯನ್ನು ನೆರವೇರಿಸಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಧಾರ್ಮಿಕ ಉಪನ್ಯಾಸಕರಾಗಿ ಸರಕಾರಿ ಪ್ರೌಢಶಾಲೆ ನಿಡ್ಲೆಯ ಗಣಿತ ಶಿಕ್ಷಕ ಶರತ್ ಕುಮಾರ್ ತುಳುಪುಳೆ ಭಾಗವಹಿಸಿ, ಗಣೇಶೋತ್ಸವದ ಮಹತ್ವ ಹಾಗೂ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳ ಬಗ್ಗೆ ಹಲವು ದೃಷ್ಟಾಂತಗಳ ಮೂಲಕ ತಿಳಿಯಪಡಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಜೈನ್ ರವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನರೇಂದ್ರ ಕುಮಾರ್, ಶಾಲೆಯ ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿ ಪೋಷಕರು ಹಾಗೂ ಎಲ್ಲಾ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಕುಮಾರಿ ಶ್ವೇತಾ ನಿರೂಪಿಸಿ, ಕಾರ್ಯಕ್ರಮದಲ್ಲಿ ಶಿಕ್ಷಕ ಯುವರಾಜ ಸ್ವಾಗತಿಸಿ, ಭವ್ಯ ಹೆಗಡೆ ಧನ್ಯವಾದ ನೀಡಿದರು. ವಿದ್ಯಾರ್ಥಿಗಳಿಂದ ಹುಲಿ ಕುಣಿತ ಮತ್ತು ನಾಸಿಕ್ ಬ್ಯಾಂಡ್ ನೊಂದಿಗೆ ಶೋಭಾ ಯಾತ್ರೆಯನ್ನು ನಡೆಸಿ, ಮಹಾಗಣಪತಿಯ ವಿಸರ್ಜನೆಯನ್ನು ನೇತ್ರಾವತಿ ನದಿಯಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸಿತರಿದ್ದರು.