Site icon Suddi Belthangady

ಎಲ್ ಸಿ ಆರ್ ಇಂಡಿಯನ್ ಪದವಿ ಕಾಲೇಜಿನಲ್ಲಿ ಆರ್.ಬಿ.ಐ ಕ್ವಿಜ್ ಬಗ್ಗೆ ಮಾಹಿತಿ

ಕಕ್ಯಪದವು: ಸೆ.9ರಂದು ಎಲ್ ಸಿ ಆರ್ ಇಂಡಿಯನ್ ಪದವಿಪೂರ್ವ ಕಾಲೇಜಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದ 90ನೇ ವಾರ್ಷಿಕೋತ್ಸವದ ಅಂಗವಾಗಿ ಕಲಿಯಿರಿ, ಆಡಿರಿ, ಗೆಲ್ಲಿರಿ ಎಂಬ ಪರಿಕಲ್ಪನೆಯಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ನಡೆಸಲ್ಪಡುವ ಆರ್.ಬಿ.ಐ ಕ್ವಿಜ್ ನ ಬಗೆಗೆ ಮಾಹಿತಿಯನ್ನು ನೀಡಲಾಯಿತು.

ಆರ್.ಬಿ.ಐ ಬಿ.ಸಿ.ರೋಡ್ ಶಾಖೆ ಇಲ್ಲಿನ ಆರ್ಥಿಕ ಸಾಕ್ಷರತಾ ವಿಭಾಗದಲ್ಲಿ ಹಿರಿಯ ಸಮಾಲೋಚಕರಾಗಿ ಕಾರ್ಯನಿರ್ವಹಿಸುವ ಅನುಶಾ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸಂಸ್ಥೆಯ ಸಂಯೋಜಕ ಯಶವಂತ್ ಜಿ ನಾಯಕ್, ಪದವಿ ವಿಭಾಗದ ಮುಖ್ಯಸ್ಥೆ ದೀಕ್ಷಿತಾ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.ವಿದ್ಯಾರ್ಥಿ ಕ್ಷೇಮಪಾನಾಧಿಕಾರಿ ವಿಂದ್ಯಾಶ್ರೀ ನಿರೂಪಿಸಿದರು.

Exit mobile version