Site icon Suddi Belthangady

ಲಾಯಿಲ: ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಕಂಪ್ಯೂಟರ್ ತರಬೇತಿಯ ಪ್ರಮಾಣ ಪತ್ರ ವಿತರಣೆ

ಬೆಳ್ತಂಗಡಿ: ತಂತ್ರಜ್ಞಾನದ ವಿದ್ಯೆ ಎನ್ನುವಂತದ್ದು ಇಂದಿನ ಪ್ರಾಪಂಚಿಕ ವ್ಯವಹಾರಕ್ಕೆ ಅತ್ಯವಶ್ಯವಾಗಿದೆ. ಜೀವನದಲ್ಲಿ ಕಲಿಕೆ ನಿರಂತರವಾಗಿರಬೇಕು. ಜ್ಞಾನವು ಎಂದೂ ಕರಗದ ಸಂಪತ್ತು. ತಾವುಗಳು ಮುಂದಿನ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕು. ಇಷ್ಟು ದೊಡ್ಡ ಸಂಸ್ಥೆಯಲ್ಲಿ ಬಂದು ತಾವು ಕಂಪ್ಯೂಟ‌ರ್ ತರಗತಿ ಪಡೆದುಕೊಂಡಿದ್ದು ತಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ – ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಸಿಬ್ಬಂದಿ – ಮಾನವ ಸಂಪನ್ಮೂಲ ವಿಭಾಗದ ಯೋಜನಾಧಿಕಾರಿ ಶ್ರೀನಿವಾಸ್ ಇವರು ಕಂಪ್ಯೂಟರ್ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು.

ಕಂಪ್ಯೂಟರ್ ತರಬೇತಿಯು ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಯೋಜನೆಯಡಿ ನೋಂದಾಯಿತವಾಗಿದ್ದು, ಕೌಶಲ್ಯ ಯೋಜನೆಯಡಿ ಪ್ರಮಾಣೀಕೃತ ಪ್ರಮಾಣ ಪತ್ರ ಮತ್ತು ಅಂಕಪಟ್ಟಿ ವಿತರಿಸಲಾಯಿತು.

ಒಟ್ಟು 22 ವಿದ್ಯಾರ್ಥಿಗಳು ಪ್ರಮಾಣಪತ್ರ ಪಡಕೊಂಡಿರುತ್ತಾರೆ.ಈ ಸಂದರ್ಭದಲ್ಲಿ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸೋಮನಾಥ್ ಕೆ. ಕಛೇರಿ ಪ್ರಬಂಧಕ ಅಣ್ಣು ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಂಪ್ಯೂಟರ್ ತರಬೇತುದಾರ ಜಯಶ್ರೀ ಇವರು ನಿರ್ವಹಣೆ ಮಾಡಿ, ವಿದ್ಯಾರ್ಥಿಗಳಿಗೆ ಶುಭಕೋರಿದರು.

Exit mobile version