ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಹುಡುಕಬೇಡಿ – ಸೃಷ್ಟಿಸಿ ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಗಾರವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಸುಬ್ರಹ್ಮಣ್ಯ ಕೆ. ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಸ್ವದೇಶಿ ಜಾಗರಣ ಮಂಚ್ ಇದರ ದಕ್ಷಿಣ ಮಧ್ಯಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ ಕೆ. ಇವರು ವಿದ್ಯಾರ್ಥಿಗಳು ಸರ್ಕಾರಿ ಕೆಲಸ ಎಂಬ ಜಪ ಮಾಡುವುದನ್ನು ಬಿಟ್ಟು ಸ್ವಯಂ ಉದ್ಯೋಗವನ್ನು ಮಾಡಲು ಅನೇಕ ಅವಕಾಶಗಳಿವೆ ಎಂದು ತಿಳಿಸಿದರು.
ದೇಶದ ಶೇಕಡಾ 34 ಉದ್ಯೋಗ ಸೃಷ್ಟಿಯಾಗಿರುವುದು ಗುಡಿ ಕೈಗಾರಿಕೆಗಳು ಸಣ್ಣ ಕೈಗಾರಿಕೆಗಳು ಮತ್ತು ಮಧ್ಯಮ ಕೈಗಾರಿಕೆಗಳಿಂದ ಆದುದರಿಂದ ನಾವು ಇನ್ನೊಬ್ಬರ ಕೈ ಕೆಳಗೆ ಗುಲಾಮರಂತೆ ಕೆಲಸ ಮಾಡುವ ಬದಲು ಉದ್ಯೋಗದಾತರಾಗಬೇಕು ಎಂದು ತಿಳಿಸಿದರು. ಇವರು ವಿದ್ಯಾರ್ಥಿಗಳಲ್ಲಿ ಕೌಶಲ್ಯವನ್ನು ನಿರ್ಮಾಣ ಮಾಡುವ ದೃಷ್ಟಿಯಿಂದ ಹಾಗೂ ಸ್ವಯಂ ಉದ್ಯೋಗವನ್ನು ಮಾಡಲು ಸರ್ಕಾರದಿಂದ ಸಿಗುವ ಬೇರೆ ಬೇರೆ ಯೋಜನೆಗಳ ಬಗ್ಗೆ ತಿಳಿಯಪಡಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಘವ ಎನ್. ಇವರು ವಹಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಡಾ.ಕುಶಾಲಪ್ಪ ಕೆ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಸುರೇಶ್ ವಿ ಮತ್ತು ಪ್ರೊ.ನವೀನ ಉಪಸ್ಥಿತರಿದ್ದರು. ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ, ರೊವರ್ ಸ್ಕೌಟ್ ಲೀಡರ್ ಡಾ.ರವಿ ಎಂ.ಎನ್. ಸ್ವಾಗತಿಸಿ, ರೇಂಜರ್ ಲೀಡರ್ ಪ್ರೊ.ರಾಜೇಶ್ವರಿ ಹೆಚ್.ಎಸ್. ವಾದಿಸಿದರು.