ನೆಲ್ಯಾಡಿ: ಕ್ರೈಸ್ತರ ಪವಿತ್ರ ಹಬ್ಬ ದೇವ ಮಾತೆ ಮರಿಯಮ್ಮನವರ ಹುಟ್ಟು ಹಬ್ಬದ ಪ್ರಯುಕ್ತ, ಮೆಸ್ಕಾಂ ಸಿಬ್ಬಂದಿಗೆ ಸನ್ಮಾನ ಮಾಡಿ ಗೌರವ ಸಲ್ಲಿಸಲಾಯಿತು. ಈ ಕಾರ್ಯಕ್ರಮವು ನೆಲ್ಯಾಡಿ ಸಂತ ಅಲ್ಫೋನ್ಸ ಸಭಾಂಗಣದಲ್ಲಿ ನೆರವೇರಿತು. ಸಮೀಪದ ಗ್ರಾಮಗಳ ಹದಿನಾಲ್ಕು ಮಂದಿ ಮೆಸ್ಕಾಂ ಲೈನ್‌ಮ್ಯಾನ್‌ರನ್ನು ಸನ್ಮಾನಿಸಲಾಯಿತು.
ಫಾ.ಶಾಜಿ ಮಾತ್ಯು ಅವರು ಮೆಸ್ಕಾಂ ಸಿಬ್ಬಂದಿಯ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು. ಅವರು, “ಮಳೆ ಅಥವಾ ಬಿಸಿಲನ್ನೆನ್ನದೆ, ನಮ್ಮ ನಾಡಿಗೆ ಬೆಳಕನ್ನು ನೀಡುವ ಕಾರ್ಯದಲ್ಲಿ ಮೆಸ್ಕಾಂ ಸಿಬ್ಬಂದಿ ತಮ್ಮ ಅಪ್ರತಿಮ ಸೇವೆ ಮೂಲಕ ಹೆಸರು ಮಾಡಿದ್ದಾರೆ. ಇವರು ನಾಡಿನ ಬೆಳಕಿನ ಕಾವಲುಗಾರರು,” ಎಂದು ತಮ್ಮ ಅಭಿನಂದನಾ ಸಂದೇಶದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಭೀಮಪ್ಪ, ಶೀತಲ್, ವಿಠ್ಠಲ್, ರಮೇಶ್, ರಜಾಕ್, ಅಡಿವೆಪ್ಪ, ಸಂಜೀವಪ್ಪ, ಶರಣಪ್ಪ, ಮೆಹಬೂಬ್, ರಹಮಾನ್, ಮಿನಿ, ರವಿ ಚಂದ್ರನ್, ಕುಮಾರ್ ಮತ್ತು ಅಶೋಕ್‌ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪುಣ್ಯ ಕ್ಷೇತ್ರದ ಟ್ರಸ್ಟಿಗಳಾದ ಶಿಬು ಪನಚಿಕ್ಕಲ್, ಜೋಬಿನ್ ಪರಪರಾಗತ್, ಅಲೆಕ್ಸ್ ಚೆಪ್ಪಿತಾನಮ್, ಆಲ್ಬನ್ ಕೈದಮಟ್ಟತಿಲ್, ರಕ್ಷಕ-ಶಿಕ್ಷಕ ಸಂಘದ ಟೊಮಿ ಮಟ್ಟಮ್, ಸಂಡೆ ಸ್ಕೂಲ್ ಮುಖ್ಯೋಪಾಧ್ಯಾಯ ರೊಯ್ ಕೊಳಂಗರಾತ್, ಮಾತೃ ವೇದಿಕೆಯ ಡಯಾನಾ ಪುದುಮನ, ಧರ್ಮ ಪ್ರಾಂತಿಯ ಪಾಲನ ಸಮಿತಿಯ ಸದಸ್ಯೆ ಮತ್ತು ಶಿಕ್ಷಕಿ ಜೇಸಿಂತ ಕೆ.ಜೆ. ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಕಾಶ್ ಕೆ. ನಿರೂಪಿಸಿದರು.