Site icon Suddi Belthangady

ಕಡಿರುದ್ಯಾವರ: ಶ್ರೀವಿದ್ಯಾ ಸರಸ್ವತಿ ಮಹಿಳಾ ಮಂಡಲದಲ್ಲಿ ವೈದ್ಯರ ನಡೆ ಕಾಡಿನ ಕಡೆ ವಿಶಿಷ್ಟ ಶಿಬಿರ

ಕಡಿರುದ್ಯಾವರ: “ವೈದ್ಯರ ನಡೆ ಕಾಡಿನ ಕಡೆ” ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಘಟಕ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಂಗಳೂರು ಬ್ರ್ಯಾಂಚ್ ನ ಕಾರ್ಯದರ್ಶಿ ಡಾ. ಅವಿನ್ ಆಳ್ವ ಹಾಗೂ ತಂಡದಿಂದ ಬುಡಕಟ್ಟು ಜನಾಂಗದವರಿಗಾಗಿ, ವಿಶಿಷ್ಟ ಆರೋಗ್ಯ ಶಿಬಿರವನ್ನು ವೈದ್ಯರ ನಡೆ ಕಾಡಿನ ಕಡೆ ಎಂಬ ಆರೋಗ್ಯ ಶಿಬಿರವನ್ನು, ಶ್ರೀವಿದ್ಯಾ ಸರಸ್ವತಿ ಮಹಿಳಾ ಮಂಡಲ ಕಡಿರುದ್ಯಾವರ ಇದರ ಕಟ್ಟಡದಲ್ಲಿ ನಡೆಸಲಾಯಿತು.

ಸ್ಥಳೀಯ ಮಲೆಕುಡಿಯ ಜನಾಂಗದ ಮುಖ್ಯಸ್ಥರಾದ ಶ್ರೀ ಐತಪ್ಪ ಮಲೆಕುಡಿಯ ಇವರು ದೀಪ ಬೆಳಗಿಸಿ ಶಿಭಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಹಿಳಾ ಮಂಡಲದ ಅಧ್ಯಕ್ಷೆಯಾದ ಲೋಕೇಶ್ವರಿ ವಿನಯಚಂದ್ರರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಎಲ್ಲರನ್ನೂ ಸ್ವಾಗತಿಸಿದರು, ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಡಾ.ಅವಿನ್ ಆಳ್ವರವರು ಮಾತನಾಡುತ್ತಾ ಕಟ್ಟ ಕಡೆಯ ಜನಾಂಗಕ್ಕೆ ವೈದ್ಯಕೀಯ ಸೇವೆ ದೊರೆತರೆ ವೈಧ್ಯಕೀಯ ಸೇವೆಗೆ ಸಾರ್ಥಕತೆ ದೊರಕುವುದಲ್ಲದೆ, ವೈದ್ಯರಿಗೂ ಕೂಡ ಮಾನಸಿಕ ನೆಮ್ಮದಿ ಶಾಂತಿ ಸಿಗುತ್ತದೆ ಎ೦ದರು.

ಮುಖ್ಯ ಅತಿಥಿಗಾಗಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ತಾಲೂಕುಅನುಷ್ಠಾನ ಸಮಿತಿಯ ನಾಮ ನಿರ್ದೇಶಿತ ಸದಸ್ಯ ಕೆ.ನೇಮಿರಾಜ್ ರವರು ಭಾಗವಹಿಸಿದ್ದರು. ಶಿಬಿರದಲ್ಲಿ ಸುಮಾರು 45 ಮಂದಿ ಭಾಗವಹಿಸಿದ್ದರು. ಪ್ರಾರ್ಥನೆಯನ್ನು ಸಂಧ್ಯಾ ಹೆಬ್ಬಾರ್ ಸಿರಿಬೈಲು ಮಾಡಿದರೆ, ಭಾರತಿ ಉದ್ಧಾರ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ನೀಡಿದರು.

Exit mobile version