Site icon Suddi Belthangady

ಬಂದಾರು: ಮೈರೋಳ್ತಡ್ಕದಲ್ಲಿ 29ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವ

ಬಂದಾರು: ಮೈರೋಳ್ತಡ್ಕ ಶಿವ ಗೆಳೆಯರ ಬಳಗ, ನವ್ಯಶ್ರೀ ಯುವತಿ ಮಂಡಲ ಇದರ ಆಶ್ರಯದಲ್ಲಿ 29ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವವು ಸಪ್ಟೆಂಬರ್ 7ರಂದು ಮೈರೋಳ್ತಡ್ಕ ವಠಾರದಲ್ಲಿ ನಡೆಯಿತು.

ಶಾಸಕ ಹರೀಶ್ ಪೂಂಜರವರು ಆಗಮಿಸಿ ಪ್ರಸಾದ ಸ್ವೀಕರಿಸಿದರು.ಪವರ್ ಮ್ಯಾನ್ ಹುದ್ದೆಯಿಂದ ಪದೋನ್ನತಿ ಪಡೆದ ಸಂದೀಪ್ ಎಂ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಮೊಗ್ರು ಶಾಲಾ ಮುಖ್ಯ ಶಿಕ್ಷಕ ಮಾಧವ ಗೌಡ, ಸಮಿತಿಯ ಅಧ್ಯಕ್ಷ ಚಂದ್ರಹಾಸ ನಡುಮಜಲು ಕಾರ್ಯದರ್ಶಿ ವಿಶ್ವನಾಥ ಪುತ್ತಿಲ, ಉಪಾಧ್ಯಕ್ಷ ಯೋಗೀಶ್ ಕೊಳ್ಳಕೋಡಿ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಖಂಡಿಗ, ಪಂಚಾಯತ್ ಸದಸ್ಯರಾದ ಸುಚಿತ್ರಾ ಮೂರ್ತಜೆ, ಮಾಜಿ ತಾಪಂ ಸದಸ್ಯ ಕೃಷ್ಣಯ್ಯ ಆಚಾರ್, ಧರ್ಣಪ್ಪ ಗೌಡ, ಪ್ರಮುಖರಾದ ಶ್ರೀಧರ ಗೌಡ, ಡೊoಬಯ್ಯ ಗೌಡ, ಮುಂತಾದವರೂ ಉಪಸ್ಥಿತರಿದ್ದರು.

ಭಕ್ತಿಗೀತೆ, ಭಜನೆ ವೈದಿಕ ಕಾರ್ಯಕ್ರಮ ನೆರವೇರಿತು. ಚೆಂಡೆ ಬೆಳಗ, ನೃತ್ಯ ಭಜನೆ, ಸಿಡಿಮದ್ದಿನ ಮೂಲಕ ನೇತ್ರಾವದಿ ನದಿ ಮುಗೇರಡ್ಕ ವೈಭವಪೂರ್ಣ ಮೆರವಣಿಗೆ ಸಾಗಿ ಬಂದಿತು. ಶೋಭಾಯಾತ್ರೆ ಸಂದರ್ಭದಲ್ಲಿ ಮೈರೋಳ್ತಡ್ಕ ಶಿವಾಜಿ ಸರ್ಕಲ್ ಬಳಿ ಶಿವಾಜಿ ಫ್ರೆಂಡ್ಸ್ ಶಿವನಗರ ತಂಡದವರು ಫಲಾಹಾರ, ಪಾನೀಯ, ಸಿಡಿಮದ್ದು ವ್ಯವಸ್ಥೆ ಮಾಡಿದ್ದರು.

ಊಂತನಾಜೆ ಲಕ್ಷ್ಮೀನಾರಾಯಣ ಭಜನಾ ಮಂದಿರ, ಶ್ರೀರಾಮ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ, ಶ್ರೀ ದುರ್ಗಾನುಗ್ರಹ ಭಜನಾ ಮಂದಿರ ಮುಗೇರಡ್ಕ ಹಾಗೂ ಇನ್ನಿತರ ಕಡೆ ಪಾನೀಯ ಫಲಾಹಾರ ವ್ಯವಸ್ಥೆ ಮಾಡಿ ಸಹಕರಿಸಿದರು.

Exit mobile version