Site icon Suddi Belthangady

ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ(ತೆನೆ ಹಬ್ಬ)

ಬೆಳ್ತಂಗಡಿ: ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ(ತೆನೆ ಹಬ್ಬ)ವನ್ನು ಸೆಪ್ಟೆಂಬರ್ 8ರಂದು ಆಚರಿಸಲಾಯಿತು.ಈ ಹಬ್ಬವನ್ನು ಮಾತೆ ಕನ್ಯಾ ಮರಿಯಮ್ಮಳ ಹುಟ್ಟು ಹಬ್ಬದಂದು ಆಚರಿಸುವುದು ರೂಡಿ. ಬೆಳ್ತಂಗಡಿ ಚರ್ಚ್ ಬಸ್ ಸ್ಟಾಂಡ್ ಬಳಿಯ ಸರ್ವಿಸ್ ರೋಡ್ ಬಳಿ ತೆನೆಯನ್ನು ಆಶೀರ್ವಾದಿಸಿ ದೇವರ ಶುಭ ಸಂದೇಶವನ್ನು ಚರ್ಚ್ ಧರ್ಮ ಗುರುಗಳಾದ ವಂದನಿಯ ವಾಲ್ಟರ್ ಡಿಮೆಲ್ಲೊರವರು ತುಳುವಿನಲ್ಲಿ ನೀಡಿದರು.

ವಂದನೀಯ ಗುರುಗಳಾದ ಕ್ಲಿಫರ್ಡ್ ಪಿಂಟೊ ರವರು ತೆನೆಯನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಂದನೀಯ ಗುರುಗಳಾದ ಜೇಸುದಾಸ್ ಕೂಡ ಹಾಜರಿದ್ದರು.

ಮೆರವಣಿಗೆ ನಡೆದು ಚರ್ಚ್ ನಲ್ಲಿ ಬಲಿಪೂಜೆ ನಡೆಯಿತು. ಹಲವಾರು ಭಕ್ತರು ಈ ಬಲಿಪೂಜೆಯಲ್ಲಿ ಪಾಲುಗೊಂಡರು. ಬಲಿಪೂಜೆಯ ನಂತರ ಎಲ್ಲಾ ಭಕ್ತರಿಗೆ ಸಿಹಿ ಹಂಚಲಾಯಿತು ಹಾಗೂ ಎಲ್ಲಾ ವಾಹನಗಳನ್ನು ಆಶೀರ್ವಾದಿಸಲಾಯಿತು. ಎಲ್ಲರು ತಮ್ಮ ತಮ್ಮ ಮನೆಯಲ್ಲಿ ಕುಟುಂಬದವರೊಂದಿಗೆ ಹೊಸ ಊಟವನ್ನು ಸವಿಯುವುದೊಂದಿಗೆ ಸಹಬಾಳ್ವೆಯ ಸಂದೇಶವನ್ನು ಸಾರಲಾಯಿತು.

Exit mobile version