Site icon Suddi Belthangady

ಸ್ಪೇನ್ಸ್ ಗಾಟ್ ಟಾಲೆಂಟ್‌ನಲ್ಲಿ ಉಜಿರೆಯ ವಿಲಾಸ್ ನಾಯಕ್

ಬೆಳ್ತಂಗಡಿ: ಉಜಿರೆಯಲ್ಲಿ ಹುಟ್ಟಿ ಬೆಳೆದು ಏಷ್ಯಾದ ಅತಿ ವೇಗದ ಚಿತ್ರ ಕಲಾವಿದ ಎಂಬ ಹಿರಿಮೆಗೆ ಪಾತ್ರರಾಗಿರುವ, ದೇಶ-ವಿದೇಶಗಳಲ್ಲಿ ಹೆಸರು ಮಾಡಿರುವ ಭಾರತದ ಹೆಮ್ಮೆಯ ಸ್ಪೀಡ್ ಆರ್ಟಿಸ್ಟ್ ವಿಲಾಸ್ ನಾಯಕ್ ಸ್ಪೇನ್ಸ್ ಗಾಟ್ ಟ್ಯಾಲೆಂಟ್-2024ರಲ್ಲಿ ಭಾಗವಹಿಸಿದ್ದಾರೆ.

ಇದರ ಆಡಿಷನ್ ರೌಂಡ್ ಸೆ.7ರಂದು ಪ್ರಸಾರವಾಗಿದ್ದು, ಸ್ಪೇನ್‌ನ ಖ್ಯಾತ ಗಾಯಕ ಜೂಲಿಯೋ ಇಗ್ಲೇಸಿಯಸ್ ಅವರ ಕಲಾಕೃತಿಯನ್ನು ಬಿಡಿಸುವ ಗೌರವ ದೊರೆತಿದೆ. ಕೇವಲ 2.5 ನಿಮಿಷದಲ್ಲಿ ಲೈವ್ ಆಗಿ ಈ ಚಿತ್ರವನ್ನು ರಚಿಸಿದ್ದೇನೆ ಎಂದು ವಿಲಾಸ್ ನಾಯಕ್ ತನ್ನ ಫೇಸ್‌ಬುಕ್ ಪುಟದಲ್ಲಿ ತಿಳಿಸಿದ್ದು, ಚಿತ್ರ ರಚನೆ ಮಾಡಿರುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.

Exit mobile version