ಕೊಕ್ಕಡ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಟ್ಟೂರು ವತಿಯಿಂದ ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯ ಆವರಣದಲ್ಲಿ 40ನೇ ವರ್ಷದ ಗಣೇಶೋತ್ಸವ ವಿಜೃಂಭಣೆಯಿಂದ ನೆರವೇರಿತು. ಶ್ರೀ ಗಣೇಶ ಮೂರ್ತಿಯನ್ನು ಕೊಕ್ಕಡದ ಕಾಪಿನಬಾಗಿಲಿನಿಂದ ಭವ್ಯ ಮೆರವಣಿಗೆಯಲ್ಲಿ ತರಲಾಯಿತು.ಸಂಜೆ ನಂದಾದೀಪ ಬೆಳಗಿಸಿ, ಶ್ರೀ ಗಣೇಶನ ಮೂರ್ತಿ ಪ್ರತಿಷ್ಠಾ ಮಹೋತ್ಸವ ನೆರವೇರಿತು.
ರಾತ್ರಿ ಶ್ರೀನಿಧಿ ಅಂಗನವಾಡಿ ಕೇಂದ್ರ ಪಟ್ಟೂರು ಇಲ್ಲಿನ ಪುಟಾಣಿಗಳಿಂದ ವಿವಿಧ ವಿನೋದಾವಳಿಗಳು ಹಾಗೂ ಶ್ರೀರಾಮ ವಿದ್ಯಾ ಸಂಸ್ಥೆಯ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆಯಿತು. ಬಳಿಕ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆಯಾದ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.
ರಾತ್ರಿ “ಪುಗರ್ತೆ ಕಲಾವಿದೆರ್ ವಿಟ್ಲ” ಮೈರಕೇಪು ಇಲ್ಲಿನ ಕಲಾ ಕುಸುಮಗಳಿಂದ ನೈಜ ಘಟನೆ ಆಧಾರಿತ ಕುತೂಹಲ ಭರಿತ ಸಾಮಾಜಿಕ ನಾಟಕ “ಕಾಂಚನ” ಪ್ರದರ್ಶನಗೊಂಡಿತು. ಗಣೇಶ ಚತುರ್ಥಿಯಂದು ಬೆಳಗ್ಗೆ ಗಣಹೋಮ, ಬೆಳಗ್ಗಿನ ಪೂಜೆ, ಶ್ರೀ ವೈದ್ಯನಾಥೇಶ್ವರ ಭಜನಾ ಮಂಡಳಿ, ಕೊಕ್ಕಡ ಇದರ ಸದಸ್ಯರುಗಳಿಂದ ಭಜನಾ ಕಾರ್ಯಕ್ರಮ ಜರುಗಿತು. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಸಂಜೆ ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಆವರಣದಿಂದ ಪಟ್ರಮೆ ಶ್ರೀ ವಿಷ್ಣುಮೂರ್ತಿ ಸನ್ನಿಧಿಯ ಕಪಿಲಾ ನದಿಯವರೆಗೆ ಶ್ರೀ ಗಣೇಶ ಮೂರ್ತಿಯ ಭವ್ಯಶೋಭ ಯಾತ್ರೆ ನೆರವೇರಿತು. ಬಳಿಕ ಶ್ರೀದೇವರ ಜಲಸ್ತಂಭನ ನೆರವೇರಲಿದೆ.