Site icon Suddi Belthangady

ಮದ್ದಡ್ಕ ಬಂಡೀಮಠ ಮೈದಾನದಲ್ಲಿ 13ನೇ ವರ್ಷದ ಗಣೇಶೋತ್ಸವ

ಮದ್ದಡ್ಕ: ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.6ರಿಂದ ಸೆ.7ವರೆಗೆ ಮದ್ದಡ್ಕ ಬಂಡೀಮಠ ಆಟದ ಮೈದಾನದ ವೆಲ್‌ಕಂ ಯೂತ್ ಕ್ಲಬ್‌ನ ಬಯಲು ರಂಗಮಂದಿರದಲ್ಲಿ ನಡೆಯಿತು.

ಸಾರ್ವಜನಿಕ ಶ್ರೀ ಗಣೇಶೋತ್ಸವವು ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಧಿವತ್ತಾಗಿ ಶ್ರೀ ವೆಂಕಟೇಶ್ ಭಟ್, ಆಲಂತಿಲ ಇವರ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ಪ್ರಾರಂಭಗೊಂಡು, ಕ್ರೀಡಾಕೂಟವು ಪ್ರಾರಂಭಗೊಂಡಿತು.

ಮದ್ದಡ್ಕ ಮಠದ ಅರ್ಚಕ ರಾಘವೇಂದ್ರ ಭಟ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಫನ ತಿರ್ ಮಾಲ್ ಮಾಲಕ ಅಬ್ದುಲ್ ರಶೀದ್, ನಿವೃತ್ತ ಲೋಕೋಪೋಯೋಗಿ ಇಲಾಖೆಯ ಸಿ.ಆರ್.ನರೇಂದ್ರ, ಜೋರ್ಡನ್ ರಿವರ್ ಫ್ಯಾಮಿಲಿ ರೆಸ್ಟೋರೆಂಟ್ ಮಾಲಕ ಜೈಸನ್ ಜೋಯಲ್ ಡಿ’ಸೋಜಾ, ಉಜಿರೆ ಜನಾರ್ದನ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಗಂಗಾಧರ ರಾವ್ ಕೆವುಡೇಲು, ಉದಯ ಕಿಶೋರ್ ಶೆಟ್ಟಿ ಹಿಬರೋಡಿ, ಜೆರೋಮ್ ಡಿ’ಸೋಜಾ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಗೋಪಿನಾಥ್ ನಾಯಕ್, ಉಮೇಶ್ ಕುಮಾರ್, ಜಯರಾಮ್ ಶೆಟ್ಟಿ, ಎಂ ಲತೇಶ್ ಶೆಣೈ, ದಾಮೋದರ ಪೂಜಾರಿ, ಧನಲಕ್ಷ್ಮೀ, ಚಂದ್ರಶೇಖರ್ ಕೋಟ್ಯಾನ್, ದಿನೇಶ್ ಮೂಲ್ಯ, ಪ್ರಧಾನ ಅರ್ಚಕ ವೆಂಕಟೇಶ್ ಭಟ್, ಯತೀಶ್ ಪ್ರಭು, ಅನೂಪ್ ಎಂ ಬಂಗೇರ, ಪದ್ಮನಾಭ ಸಾಲಿಯಾನ್, ಹರೀಶ್ ಕೋಟ್ಯಾನ್, ಸುಂದರ ನಾಯ್ಕ, ಪ್ರದೀಪ್, ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮಗಳ ವಿವರ: ಸೆ 6ರಂದು ಸಂಜೆ ಗಣಪತಿ ದೇವರನ್ನು ಬರಮಾಡಿಕೊಳ್ಳಲಾಯಿತು.ಸಂಜೆ ಭಜನಾ ಕಾರ್ಯಕ್ರಮ, ಗೌರಿ ಪೂಜೆ, ರಾತ್ರಿ ಪಿಂಗಾರ ಕಲಾವಿದೆರ್ ಬೆದ್ರ ಅವರಿಂದ ‘ಕದಂಬ’ ಮನರಂಜನಾ ಕಾರ್ಯಕ್ರಮ.ನಡೆಯಿತು. ಸೆ 07 ಬೆಳಿಗ್ಗೆ ಗಂಟೆ ಪುಣ್ಯಹವಾಚನ, ಗಣಪತಿ ದೇವರ ಪ್ರತಿಷ್ಠೆ, ಪ್ರಸಾದ ವಿತರಣೆ, ಕ್ರೀಡಾಕೂಟ, ರಂಗಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಬಹುಮಾನ ವಿತರಣೆ, ಸಂಜೆ ‘ಶೋಭಾಯಾತ್ರೆ’ ನಡೆಯಲಿದೆ.

Exit mobile version