Site icon Suddi Belthangady

ಇಂದಬೆಟ್ಟು-ನಾವೂರು 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಬೆಳ್ತಂಗಡಿ: ಇಂದಬೆಟ್ಟು ವಿಶ್ವ ಹಿಂದೂ ಪರಿಷತ್ ಮತ್ತು ನಾವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸೆ.7ರಂದು 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಇಂದಬೆಟ್ಟು ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ನಡೆಯಿತು.

7ರಂದು ಬೆಳಗ್ಗೆ 8.30ಕ್ಕೆ ನಾವೂರು ಪೇಟೆಯಿಂದ ಭಜನೆ ಮೂಲಕ ದೇವರ ಮೂರ್ತಿಯ ಮೆರವಣಿಗೆ, 9ಕ್ಕೆ ಬೆಳ್ತಂಗಡಿಯ ಉದ್ಯಮಿ ರಾಘ್ನೇಶ್ ಸಾಲಿಯಾನ್‌ರಿಂದ ಉತ್ಸವ ಉದ್ಘಾಟನೆ, 10ಕ್ಕೆ ಭಜನೆ, 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 2.30ಕ್ಕೆ ಭಕ್ತಿಗೀತೆ, ವಂದೇ ಮಾತರಂ ಸ್ಪರ್ಧೆ ನಡೆಯಿತು.ಸಂಜೆ 4ರಿಂದ ಭಜನೆ, ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ರಾತ್ರಿ 7ರಿಂದ ತೋನ್ಸೆ ಪುಷ್ಕಳ ಕುಮಾರ್‌ರಿಂದ ಸ್ಯಮಂತಕೋಪಾಖ್ಯಾನ (ಚೌತಿ ಚಂದ್ರ) ಹರಿಕಥಾ ಕೀರ್ತನೆ ನಡೆಯಲಿದೆ.

8ರಂದು ಬೆಳಗ್ಗೆ 9ಕ್ಕೆ ವಿವಿಧ ಭಜನಾ ತಂಡಗಳಿಂದ ಕಮ್ಮಟ ಭಜನೆ ನಡೆಯಲಿದೆ. 11 ಗಂಟೆಗೆ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರೊ.ಸುಮಂತ್ ಕುಮಾರ್ ಜೈನ್ ಬೆಳ್ಳೂರುಗುತ್ತು ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಕುದ್ರೋಳಿ ಗೋಕರ್ಣನಾಥ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸ ನೀಡುವರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಯಶೋಧರ ಬಲ್ಲಾಳ್ ಬಂಗಾಡಿ ಅರಮನೆ, ಅಜಿತ್‌ಕುಮಾರ್ ಜೈನ್ ಇಂದಬೆಟ್ಟು ಗುತ್ತು, ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಪ್ರದೀಪ್ ಎ., ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಜೀವ ಗೌಡ, ನಾವೂರು ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಹರೀಶ್ ಸಾಲಿಯಾನ್ ಉಪಸ್ಥಿತರಿರುವರು.

ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. 3ರಿಂದ ಕುಣಿತ ಭಜನೆ, ಹುಲಿವೇಷ ಕುಣಿತ, ಗೊಂಬೆ ಕುಣಿತ, ಸ್ತಬ್ಧಚಿತ್ರ ಸಹಿತ ಶ್ರೀ ಮಹಾಗಣಪತಿ ದೇವರ ವೈಭವದ ಶೋಭಾಯಾತ್ರೆ ನಡೆಯಲಿದೆ.

Exit mobile version