Site icon Suddi Belthangady

ಕಳಿಯ: ಗ್ರಾ.ಪಂ ನಲ್ಲಿ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಅಭಿಯಾನ

ಕಳಿಯ: ಕಳಿಯ ಗ್ರಾಮ ಪಂಚಾಯತ್ ಮತ್ತು ಪಶುಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಹುಚ್ಚು ನಾಯಿ ಉಚಿತ ರೋಗ ನಿರೋಧಕ ಲಸಿಕಾ ಶಿಬಿರವು ಸೆ.5ರಂದು ಕಳಿಯ ಗ್ರಾಮ ಪಂಚಾಯಿತಿ ವಠಾರದಲ್ಲಿ ಜರಗಿತು.ಲಸಿಕ ಶಿಬಿರವನ್ನು ಕಳಿಯ ಗ್ರಾಮ ಪಂಚಾಯತಿ ಅಧ್ಯಕ್ಷ ದಿವಾಕರ ಎಂ ಚಾಲನೆ ನೀಡಿ ಮಾತಾನಾಡಿ ರೇಬಿಸ್ ರೋಗದ ನಿರ್ಮೂಲನೆಗೆ ಪಂಚಾಯತ್ ಕಡೆಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆಂದು ಭರವಸೆ ನೀಡಿದರು.

ಪಶು ವೈದ್ಯಕೀಯ ಸೇವಾ ಇಲಾಖೆ ಬೆಳ್ತಂಗಡಿ ಇದರ ಸಹಾಯಕ ನಿರ್ದೇಶಕ ಡಾ.ರವಿಕುಮಾರ್ ರವರು ಈ ಶಿಬಿರದ ಬಗ್ಗೆ ಮಾಹಿತಿ ನೀಡುತ್ತಾ ಕೇಂದ್ರ ಸರ್ಕಾರದ ಯೋಜನೆಯಂತೆ 2030 ಅವಧಿಗೆ ರೇಬಿಸ್ ರೋಗ ಸಂಪೂರ್ಣ ನಿರ್ಮೂಲನಾ ಬಹುದೊಡ್ಡ ಕನಸಾಗಿದ್ದು ಇದನ್ನು ನನಸುಗೊಳಿಸಬೇಕಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷೆ ಸುಭಾಷಿಣಿ ಕೆ, ಪಂಚಾಯತ್ ಸದಸ್ಯರಾದ ವಿಜಯ ಕುಮಾರ್ ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಪಶು ವೈದ್ಯಕೀಯ ಸೇವಾ ಇಲಾಖೆ ಬೆಳ್ತಂಗಡಿ ಇಲ್ಲಿಯ ಸಿಬ್ಬಂದಿಗಳಾದ ರಂಗನಾಥ್ ಸಿ ಆರ್ ಮತ್ತು ಚಂದ್ರಕುಮಾರ್, ಕಳಿಯ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ, ರವಿ ಹೆಚ್, ಸುರೇಶ್ ಕುಮಾರ್, ಸುಚಿತ್ರಾ, ಶಶಿಕಲಾ, ನಂದಿನಿ, ಮಾನಸ, ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಶುಸಖಿ ಕೆ ರೂಪ ಸಹಕರಿಸಿದರು.

ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೈದ್ಯರ 2 ತಂಡಗಳನ್ನು ರಚಿಸಿ ಸುಮಾರು 17ಕ್ಕೂ ಹೆಚ್ಚಿನ ಕಡೆ ಸುಮಾರು 200ಕ್ಕೂ ಹೆಚ್ಚು ಸಾಕು ನಾಯಿಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆಯನ್ನು ಉಚಿತವಾಗಿ ಹಾಕಿಸಿಕೊಂಡರು.

ಪಂಚಾಯತ್ ಕಾರ್ಯದರ್ಶಿ ಕುಂಞ ಕೆ ಇವರು ಸ್ವಾಗತಿಸಿ, ಧನ್ಯವಾದವಿತ್ತರು.

Exit mobile version