Site icon Suddi Belthangady

ಬೈಕ್ ಅಪಘಾತ- ಬೆಳಾಲು ಜಲಕ್ಕಾರು ನಿವಾಸಿ ಶೀನಪ್ಪ ಗೌಡ ಸಾವು

ಬೆಳಾಲು: ಬೆಳಾಲು ಗ್ರಾಮದ ಜಲಕ್ಕಾರು ನಿವಾಸಿ ಶೀನಪ್ಪ ಗೌಡ(65ವ)ರವರು ಬೆಳಾಲಿನ ಪೀನಾರಿ ಎಂಬಲ್ಲಿ ನಡೆದ ಬೈಕ್ ಅಪಘಾತದಲ್ಲಿ ಚಿಕಿತ್ಸೆ ಫಲಿಸದೆ ಸೆ.5ರಂದು ಸಾವನ್ನಪ್ಪಿದರು.

ಅವರು ಸೆ.4ರಂದು ಸಂಜೆ ಬೆಳಾಲಿನ ಹಾಲಿನ ಡೈರಿಗೆ ಹಾಲು ಹಾಕಿ ವಾಪಾಸು ಮನೆಗೆ ಬರುವ ವೇಳೆಗೆ ಪೀನಾರಿ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದರು.ಇವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ನಿಧನರಾದರು.

ಇವರು ಪತ್ನಿ, ಎರಡು ಗಂಡು, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Exit mobile version