Site icon Suddi Belthangady

ಬೆಳ್ತಂಗಡಿ: ಸಂತೆಕಟ್ಟೆ ಹೆರಾಜೆ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡ ಮಾನ್ವಿ ಲೈಟ್ ಹೌಸ್ ನ ಉದ್ಘಾಟನೆ- ಗೃಹ, ಕಛೇರಿಯ ಸೌಂದರ್ಯ ಹೆಚ್ಚಿಸುವ ವಿನೂತನ ವಿದ್ಯುತ್ ದೀಪಗಳು ಲಭ್ಯ

ಬೆಳ್ತಂಗಡಿ: ಸಂತೆಕಟ್ಟೆ ಹೆರಾಜೆ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡ ಮಾನ್ವಿ ಲೈಟ್ ಹೌಸ್ ಇದರ ಉದ್ಘಾಟನೆಯು ಸೆ.5ರಂದು ನಡೆಯಿತು.

ಬೆಳ್ತಂಗಡಿ ರೇಣುಕಾ ಟೆಕ್ಸ್ ಟೈಲ್ಸ್ ಮಾಲಕ ಜಯರಾಮ್ ಬಂಗೇರ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ಮಾಲಕರ ಮಾತ-ಪಿತರಾದ ಲೋಕನಾಥ ಪೂಜಾರಿ-ಸುಶೀಲ, ಮಾನ್ವಿ ಎಲೆಕ್ಟಿಕಲ್ ಮಾಲಕ ಅಶ್ವಥ್ ಕುಮಾ‌ರ್, ಪ್ರವೀಣ್‌ ಕುಮಾ‌ರ್, ಅಶ್ವಿನಿ ಉಪಸ್ಥಿತರಿದ್ದರು.ಸಂಸ್ಥೆಗೆ ಆಗಮಿಸಿದ ಅತಿಥಿ ಗಣ್ಯರನ್ನು ಮಾಲಕ ಕಮಲಾಕ್ಷ ಸ್ವಾಗತಿಸಿದರು.

ಎಲ್.ಇ.ಡಿ ಸ್ವೀಪ್ ಲೈಟ್, ರೋಪ್ ಲೈಟ್, ಟ್ರಾಕ್ ಲೈಟ್, ಪಾನೆಲ್ ಲೈಟ್, ಸ್ಪೋಟ್ ಲೈಟ್, ಫ್ಯಾನ್ಸಿ ಲೈಟ್ ಹಾಗೂ ಮನೆಯ ಸೌಂದರ್ಯ ಹೆಚ್ಚಿಸುವ ಲೈಟ್ ಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ಕಮಲಾಕ್ಷ ತಿಳಿಸಿದ್ದಾರೆ.

Exit mobile version