Site icon Suddi Belthangady

ಬೆಳ್ತಂಗಡಿ ಲಯನ್ಸ್ ಕ್ಲಬ್, ಲಯನ್ಸ್ ಸೇವಾ ಟ್ರಸ್ಟ್ ವತಿಯಿಂದ ಸೇವಾ ಸಂಸ್ಥೆಗಳಿಗೆ ಸಹಾಯಧನ ವಿತರಣೆ

ಉಜಿರೆ: ಬೆಳ್ತಂಗಡಿ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಸೇವಾ ಟ್ರಸ್ಟ್ ಇದರ ಸಹಯೋಗದಲ್ಲಿ ಸೇವಾ ಕಾರ್ಯಕ್ರಮದಡಿ ಉಜಿರೆಯಲ್ಲಿರುವ ಸಾನಿದ್ಯ ಸ್ಕಿಲ್ ಟ್ರೈನಿಂಗ್ ಸೆಂಟರ್, ಲಾಯಿಲದಲ್ಲಿರುವ ದಯಾ ವಿಶೇಷ ಶಾಲೆ ಹಾಗು ಬೆಳ್ತಂಗಡಿ ಸಂಜಯನಗರದಲ್ಲಿರುವ ಓಲ್ಡ್ ಏಜ್ ಹೋಂ ಮತ್ತು ಕಾರ್ಕಳ ಬೈಲೂರಿನ ಹೊಸ ಬೆಳಕು ಸೇವಾ ಸಂಸ್ಥೆಗೆ ಭೇಟಿ ನೀಡಿ ಸಹಾಯಧನವಾಗಿ ತಲಾ ರೂ.25000 ಮೊತ್ತದ ಚೆಕ್ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ, ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಲಯನ್ ಸೇವಾ ಟ್ರಸ್ಟ್ ಕಟ್ಟಡ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಬೆಂಗತ್ಯಾರ್, ಕೋಶಾಧಿಕಾರಿ ನಿತ್ಯಾನಂದ್ ನಾವರ, ಪೂರ್ವ ಪ್ರಾಂತೀಯ ಅಧ್ಯಕ್ಷ ವಸಂತ್ ಶೆಟ್ಟಿ ಶ್ರದ್ದಾ, ಕ್ಲಬ್ ನ ಸದಸ್ಯರಾದ ನಾಣ್ಯಪ್ಪ ನಾಯ್ಕ್, ಶಾಲಿನಿ ವಸಂತ್, ದೀಪ ಕಿರಣ್ ಮೊದಲಾದವರು ಉಪಸ್ಥಿತರಿದ್ದರು.

Exit mobile version