ಬೆಳ್ತಂಗಡಿ: ಬೆಳ್ತಂಗಡಿ ಬಸ್ ನಿಲ್ದಾಣದ ವಠಾರದಲ್ಲಿ ಸೆ.4ರಂದು ಬೀದಿನಾಯಿಯೊಂದು ಕಂಡಕಂಡವರಿಗೆ ಕಚ್ಚುತ್ತಿದ್ದು, ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯತ್‌ಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೆಳ್ತಂಗಡಿ ಬಸ್ ನಿಲ್ದಾಣ, ನೂತನ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿರುವ ಜಾಗ, ತಾಲೂಕು ಕಚೇರಿ ಸುತ್ತಮುತ್ತ ನಾಯಿ ಓಡಾಡುತ್ತಿದೆ. ನಿಂತಿರುವವರಿಗೆ ಹಿಂದಿನಿಂದ ಬಂದು ನಾಯಿ ಕಚ್ಚುತ್ತಿದ್ದು, ನಾಲ್ಕೈದು ಮಂದಿ ಈಗಾಗಲೇ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಓರ್ವ ಬಾಲಕನಿಗೆ ತೀವ್ರ ಗಾಯವಾಗಿ ರಕ್ತ ಬಂದಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಹುಚ್ಚುನಾಯಿ ಶಂಕೆ: ಕಂಡವರಿಗೆ ಕಚ್ಚುತ್ತಿರುವುದರಿಂದ ಇದು ಹುಚ್ಚುನಾಯಿ ಇರಬಹುದು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಪಟ್ಟಣ ಪಂಚಾಯತ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ನಾಯಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.